ಮಂಡ್ಯ: ಮಂಡ್ಯದ ಬಿಜೆಪಿ ಕಾರ್ಯಕರ್ತೆ ಆಶಾ ಎಂಬುವರು ಸಲಿಂಗಕಾಮಕ್ಕೆ ಪೀಡಿಸುತ್ತಿದ್ದರು ಎಂದು ವಿಧವೆಯೊಬ್ಬರು ಆರೋಪಿಸಿದ್ದಾರೆ.
ಹೋಮೋಸೆಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಆಶಾ ಎನ್ನುವವಳು ನಿರಂತರವಾಗಿ ಒತ್ತಾಯಿಸಿದ್ದಾಳೆ ಎಂದು ನೊಂದ ವಿಧವೆಯೊಬ್ಬಳು ಆರೋಪಿಸಿದ್ದು, ಇದಕ್ಕೆ ಒಪ್ಪದಿದ್ದಾಗ ನನ್ನನ್ನು ಸಾರ್ವಜನಿಕವಾಗಿ ನಿಂದಿಸಿದ್ದಾಳೆ ಎಂದು ಆಕೆ ದೂರಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದರು ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿ ಸಂಧಾನ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಹೀಗಾಗಿ ವಕೀಲರ ಮೂಲಕ ಬಿಜೆಪಿ ಕಾರ್ಯಕರ್ತೆ ಆಶಾ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ ಎಂದು ನೊಂದ ವಿಧವೆ ಹೇಳಿದ್ದಾರೆ.