ಮೈಸೂರು: ಇಲ್ಲಿನ ಕುವೆಂಪುನಗರ ಠಾಣೆ ವ್ಯಾಪ್ತಿಯ ನಿವಾಸಿ ಗೌರಮ್ಮ ಎಂಬವರ ಪುತ್ರಿ ವನಿತಾ (17) ನಾಪತ್ತೆಯಾಗಿದ್ದಾರೆ. ಜ.16 ರಂದು ರಾಮಕೃಷ್ಣನಗರದಲ್ಲಿರುವ ಜಯಲಕ್ಷ್ಮಿ ಪಿಯು ಕಾಲೇಜಿಗೆ ಹೋದ ತನ್ನ ಪುತ್ರಿ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಮಾಡಿಕೊಡುವಂತೆ ಗೌರಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418324 ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.