ಮೂಗೂರು: ಶಾಸಕರ ಅನುದಾನವನ್ನು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಗ್ರಾಮದ ಮುಖಂಡ ಮಾಜಿ ಪ್ರಧಾನರಾದ ಎಂ.ಡಿ. ಬಸವರಾಜು ಹೇಳಿದರು.
ಇಲ್ಲಿನ ಶ್ರೀ ದೇಶ್ವೇಶ್ವರಸ್ವಾಮಿ ಪಾರ್ವತಮ್ಮನವರ ದೇವಸ್ಥಾನದ ಅವರಣದ ಶಾಸಕರ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಅವರು ಮಾತನಾಡಿದರು. ಚುನಾವಣೆ ಸಂದರ್ಭ ಹೊರತುಪಡಿಸಿ, ನಂತರದ ದಿನಗಳಲ್ಲಿ ಗ್ರಾಮದ ಎಲ್ಲಾ ಜನರ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಅದರಂತೆ ಕೆರೆ ಅಭಿವೃದ್ಧಿ, ವಿದ್ಯುತ್ ಘಟಕ, ಸಮುದಾಯ ಆರೋಗ್ಯ ಕೇಂದ್ರ, ಸೇತುವೆ ನಿರ್ಮಾಣ, ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ದುರಸ್ತಿ, ಕಲ್ಯಾಣಿ ಅಭಿವೃದ್ಧಿ, ರಥದ ನಿಲ್ದಾಣ, ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಕೀರ್ತಿ ಶಾಸಕರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು. ಮುಖಂಡರಾದ ಎಂ.ಆರ್. ಸುಂದರ್, ಎಂ.ಪಿ. ನಿಂಗಪ್ಪ, ಮರಿಸ್ವಾಮಿ, ಎಂ.ಎನ್. ಸೋಮಣ್ಣ, ಎಂ.ಡಿ. ಸುಂದರಪ್ಪ, ಎಂಜಿನಿಯರ್ ಸುರೇಶ್, ಎಂ.ಎನ್. ಚಂದ್ರಶೇಖರ್, ಮಹದೇವಸ್ವಾಮಿ, ನಿಜಗುಣ, ನಾಗೇಂದ್ರ, ಸತೀಶ್, ಕೆ. ಶೇಷಣ್ಣ, ರಮೇಶ್ ಹಾಗೂ ಗ್ರಾಮಸ್ಥರು ಇದ್ದರು.