ಮೈಸೂರು: ನಗರದ ವಿಶ್ವಮಾನವ ವಿದ್ಯಾರ್ಥಿ ವೇದಿಕೆ, ರಂಗಕಹಳೆ ಮತ್ತು ಅಕ್ಷಯ ಸಂಸ್ಥೆ ಆಯೋಜಿಸಿದ್ದ ಚಿಣ್ಣರ ಲೋಕ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದ ಭೂರಂಗದಲ್ಲಿ ಮೇ 10ರ ಸಂಜೆ 5.30ಕ್ಕೆ ನಡೆಯಲಿದೆ.
ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅಧ್ಯಕ್ಷತೆ ವಹಿಸುವರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಸಮಾರೋಪ ಭಾಷಣ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ, ಚಿಲ್ಡ್ರನ್ಸ್ ಇಂಡಿಯಾ ಅಧ್ಯಕ್ಷ ಪ್ರೊ.ಎನ್.ಆರ್. ನಂಜುಂಡೇಗೌಡ, ತಾರಿಣಿ ಚಿದಾನಂದ, ಸಾಹಿತಿ ಡಾ. ಪ್ರಭುಶಂಕರ, ವಿಮರ್ಶಕ ಪ್ರೊ.ಕೆ.ಎಸ್. ಭಗವಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ರಂಗ ಕಹಳೆ ಸಂಚಾಲಕ ಸಿ. ಲಕ್ಷ್ಮಣ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಜೆ 7ಕ್ಕೆ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕ ಪ್ರದರ್ಶನ ಇದೆ ಎಂದರು.
ಗೋಷ್ಠಿಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಎಂ.ಜೆ. ಸುರೇಶ್ಗೌಡ, ಮಾರ್ಷಲ್ ಆರ್ಟ್ಸ್ನ ಗಣೇಶ್ ಇದ್ದರು.