ಮೈಸೂರು

ಶೈಕ್ಷಣಿಕ ಸಬಲೀಕರಣ ಕಾರ್ಯಾಗಾರ

ಕ.ಪ್ರ.ವಾರ್ತೆ ,  ಮೈಸೂರು ,  ಮೇ 15
ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕ ವರ್ಗದ ಶೈಕ್ಷಣಿಕ ಸಬಲೀಕರಣ ಕುರಿತ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಜವಾಬ್ದಾರಿ ಮತ್ತು ಸಾಮರ್ಥ್ಯ ಬೆಳೆಸಿಕೊಳ್ಳುವಲ್ಲಿ ಅಧ್ಯಾಪಕ ವರ್ಗದ ಪಾತ್ರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿ ಮುಗಿಸಿದ ನಂತರ ಉದ್ಯೋಗ ಕಂಡುಕೊಳ್ಳಲು ತರಗತಿಯ ಪಾಠಗಳು ಉಪಯೋಗವಾಬೇಕು. ಹೀಗಾಗಿ ಬೋಧನೆ- ಕಲಿಕೆ ಶೈಕ್ಷಣಿಕ ಅವಧಿಯ ನಿರಂತರ ಪ್ರಕ್ರಿಯೆಗಳು. ಅಧ್ಯಾಪಕರು ಶೈಕ್ಷಣಿಕ ಯಶಸ್ಸು ಸಾಧಿಸಿದರೆ, ವಿದ್ಯಾರ್ಥಿಗಳು ವೃತ್ತಿಪರರಾಗಿ ಹೊರಹೊಮ್ಮುತ್ತಾರೆ ಎಂಬ ಅತ್ಯಮೂಲ್ಯ ಅಂಶ ತಿಳಿಸಿಕೊಡಲಾಯಿತು. ನಂತರ ನಡೆದ ತಾಂತ್ರಿಕ ಅಧಿವೇಶದಲ್ಲಿ ಶಿಕ್ಷಣತಜ್ಞ ಡಾ.ಕೆ.ಎಸ್. ಸಮೀರಾ ಸಿಂಹ, ಹಿರಿಯ ವಿಜ್ಞಾನಿ ಡಾ.ಎಂ.ಜೆ. ರವೀಂದ್ರನಾಥ, ಡಾ.ಜಿ.ಎಸ್ ಇದ್ದರು.
ಸದರಿ ಕಾರ್ಯಕ್ರಮವನ್ನು ತಾಂತ್ರಿಕ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಕಾರ್ಯಕ್ರಮ (ಟಿಇಕ್ಯೂಐಪಿ) ಹಾಗೂ ಎನ್‌ಐಇ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ