ಕ.ಪ್ರ.ವಾರ್ತೆ , ಬೈಲುಕುಪ್ಪೆ , ಮೇ 17
ಕಳೆದ 50 ವರ್ಷಗಳ ರಾಜಕೀಯದಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಯು ಯಾರು ಈ ತಾಲೂಕಿನಲ್ಲಿ ಶಾಸಕರಾಗಿಲ್ಲ ಎಂದು ಬಿಎಸ್ಆರ್ ಪಕ್ಷದ ಅಭ್ಯರ್ಥಿ ಎಚ್.ಡಿ. ಗಣೇಶ ಹೇಳಿದರು.
ಗಿರಿಜನ ಹಾಡಿಯಲ್ಲಿ ಶುಕ್ರವಾರ ಮನೆ ಮನೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಈ ತಾಲೂಕಿನ ಅಭಿವೃದ್ಧಿ ಕೆಲಸಕ್ಕಾಗಿ ಹಿಂದುಳಿದ ಅಭ್ಯರ್ಥಿಯಾದ ನನಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ನಾನು ಮತಯಾಚನೆ ಮಾಡಲು ಹೋದ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದವರು ಚುನಾವಣೆ ಅಧಿಕಾರಿಗಳನ್ನು ಕಳುಹಿಸಿ ನನಗೆ ತೊಂದರೆ ಕೊಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಚುನಾವಣೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಾಲೂಕಿನ ಬಿಎಸ್ಆರ್ ಪಕ್ಷದ ಅಧ್ಯಕ್ಷ ರೆಹಮತ್, ಜಾನುಬಾಬು, ರೈತ ಮುಖಂಡ ಜವರೇಗೌಡ, ಹಿಂದುಳಿದ ವರ್ಗದ ಮುಖಂಡ ತಿಪ್ಪೆಸ್ವಾಮಿ, ಕೋಮಲಾಪುರ ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ಪ, ಬಿಎಸ್ಆರ್ ಪಕ್ಷದ ಮುಖಂಡರಾದ ಚೆಲುವನಾಯ್ಕ, ಗ್ರಾಮಸ್ಥರಾದ ವಸಂತ, ಜಯಮ್ಮ ಇದ್ದರು.