ಮೈಸೂರು

ಸೇಠ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ

ಮೈಸೂರು: ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ವಂದೇ ಮಾತರಂ ಕೊಳಗೇರಿ ನಿವಾಸಿಗಳ ವೇದಿಕೆಯವರು ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು. ಸತತವಾಗಿ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು. ವೇದಿಕೆಯ ಅಧ್ಯಕ್ಷ ಬಿ. ರಾಜು, ಕಾರ್ಯದರ್ಶಿ ಸಲೀಂ ಪಾಷ, ಸಹ ಕಾರ್ಯದರ್ಶಿ ಅಯೂಬ್ ಖಾನ್ ಮೊದಲಾದವರು ಇದ್ದರು.

ಭಾರಿ ಮಳೆ: ಮನೆಗೆ ಹಾನಿ
ಎಚ್.ಡಿ. ಕೋಟೆ:
ತಾಲೂಕಿನ ಕಸಬಾ ಹೋಬಳಿ ಸೇರಿದಂತೆ ಅಂತರಸಂತೆ, ಕಂದಲಿಕೆ, ಸರಗೂರು, ಹಂಪಾಪುರ ಹೋಬಳಿಗಳಲ್ಲಿ ಭಾರೀ ಪ್ರಮಾಣದಲ್ಲಿ ಬಿದ್ದ ಬಿರುಗಾಳಿ ಸಹಿತ ಮಳೆಗೆ ಮನೆಗಳ ಛಾವಣಿ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ರಸ್ತೆ ಬದಿಯ ಮರಗಳು, ವಿದ್ಯುತ್ ಕಂಬಗಳು ಸಹ ನೆಲಕ್ಕುರುಳಿವೆ. ಸ್ಥಳಕ್ಕೆ ಶಾಸಕ ಎಸ್. ಚಿಕ್ಕಮಾದು, ಕಸಬಾ ಹೋಬಳಿ ಜಿಪಂ ಸದಸ್ಯ ಚಿಕ್ಕಣ್ಣೇಗೌಡ ಅವರು ರಾಜೇಗೌಡನಹುಂಡಿ ಗ್ರಾಮಕ್ಕೆ ಭೇಟಿಯನ್ನ ನೀಡಿ ಪರಿಶೀಲಿಸಿದರು. ಸೋಮವಾರ ರಾತ್ರಿಯೇ ಸ್ಥಳಕ್ಕೆ ತಹಸೀಲ್ದಾರ್ ಕೃಷ್ಣ ಭೇಟಿ ನೀಡಿದ್ದರು. ಮಂಗಳವಾರ ಬೆಳಗ್ಗೆ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳು ವರದಿ ತಯಾರಿಸಿದರು. ಅದರಂತೆ ಅಣ್ಣೂರು ಹಾಡಿ, ರಾಜೇಗೌಡಹುಂಡಿ, ಭೀಮನಹಳ್ಳಿ, ಕೆ. ಎಡತೊರೆ, ಪಾಳ್ಯ, ಗಣೇಶನಪುರ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಪ್ರಥಮ ಹಂತದ ಮಾಹಿತಿ ಪ್ರಕಾರ 90 ಮನೆಗಳ ಛಾವಣಿ ಹಾರಿ ಹೋಗಿವೆ. ಕಳೆದ ಎರಡು ದಿನಗಳಿಂದ ಬಿತ್ತನೆ ಮಾಡಿರುವ ಹತ್ತಿ ಬೀಜವು ಸಹ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಒಟ್ಟಾರೆ ಮಳೆಯಿಂದ ತಾಲೂಕಿನಲ್ಲಿ ಸುಮಾರು 45 ಲಕ್ಷ ನಷ್ಟ ಸಂಭವಿಸಿದೆ ತಹಸೀಲ್ದಾರ್ ಕೃಷ್ಣ ತಿಳಿಸಿದರು. ಶಾಸಕ ಎಸ್. ಚಿಕ್ಕಮಾದು ಮಾತನಾಡಿ, ಜಿಲ್ಲೆಯವರೇ ಸಚಿವರು ಇದ್ದು, ಅವರ ಜತೆಯಲ್ಲಿ ತಾಲೂಕಿನಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆಯಲ್ಲಿ ತಾಲೂಕು ಅಧ್ಯಕ್ಷ ಸಿ.ವಿ.ನಾಗರಾಜು, ಜಿಪಂ ಸದಸ್ಯ ಚಿಕ್ಕಣ್ಣೇಗೌಡ, ಮಾಜಿ ಜಿಪಂ ಸದಸ್ಯ ರವಿ, ಚಿಕ್ಕವೀರನಾಯಕ, ಮಾಜಿ ಪ್ರಧಾನರಾದ ಎಂ.ಸಿ. ದೊಡ್ಡನಾಯಕ, ನರಸಿಂಹೇಗೌಡ, ಯೋಗಾನರಸಿಂಹ, ಚಾ. ನಂಜುಂಡಮೂರ್ತಿ, ಶಿವಯ್ಯ, ಸುರೇಂದ್ರ, ನಾಗೇಂದ್ರ ಸ್ವಾಮಿ ಇದ್ದರು.

ಚಿಕ್ಕಣ್ಣ ಭೇಟಿ
ಎಚ್.ಡಿ. ಕೋಟೆ:
ತಾಲೂಕಿನ ರಾಜೇಗೌಡನಹುಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಗೆ 80ಕ್ಕೂ ಹೆಚ್ಚು ಮನೆಗಳ ಹೆಂಚು ಮತ್ತು ಶೀಟ್‌ಗಳು ಹಾರಿ ಹೋಗಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಸಂಸದ ಆರ್. ಧ್ರುವನಾರಾಯಣ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಶಾಸಕ ಚಿಕ್ಕಣ್ಣ, ಜಿಪಂ ಸದಸ್ಯೆ ನಂದಿನಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಮ್ಮಣ್ಣೇಗೌಡ, ಬಾಲಯ್ಯ, ಮಹದೇವು, ಚಂದ್ರೇಗೌಡ, ಸುರೇಶ್, ಕುಮಾರ್, ಗುರುಸ್ವಾಮಿ ಇದ್ದರು.

ನಾಳೆ ನರಸಿಂಹ ಜಯಂತಿ
ಮೈಸೂರು:
ವಿವೇಕಾನಂದ ನಗರ ಬ್ರಾಹ್ಮಣ ಮಹಾಸಭಾವು ಮೇ 23 ಮತ್ತು 24ರಂದು ದೇವಾಲಯದ ಪ್ರಾಂಗಣದಲ್ಲಿ ನರಸಿಂಹ ಜಯಂತಿ ಅಂಗವಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಿದೆ. ಅಂದು ಬೆಳಗ್ಗೆ ವಿಶೇಷ ಪೂಜೆ ಹಾಗೂ ಅಭಿಷೇಕ, ಸಂಜೆ 6.30ಕ್ಕೆ ಗಣೇಶ ಶರ್ಮ ಅವರಿಂದ ಉಪನ್ಯಾಸ ನಡೆಯಲಿದೆ.

ಇಂಟೀರಿಯರ್ ಡಿಸೈನ್ ಡಿಪ್ಲೊಮಾ
ಮೈಸೂರು ಇಂಟೀರಿಯರ್ಸ್ ಮತ್ತು ಡಿಸೈನ್ಸ್ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿಯು ಒಂದು ವರ್ಷದ ಒಳಾಂಗಣ ವಿನ್ಯಾಸದ ಡಿಪ್ಲೊಮಾ ತರಗತಿಯನ್ನು ಗೃಹಿಣಿಯರು ಮತ್ತು ವಿದ್ಯಾರ್ಥಿಗಳಿಗೆ ಏರ್ಪಡಿಸಿದೆ. ಜೂನ್ ತಿಂಗಳಿಂದ ಪ್ರತಿದಿನ ಬೆಳಗ್ಗೆ 10.30 ರಿಂದ 12.30 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4ರವರೆಗೆ ತರಗತಿ ನಡೆಯಲಿದೆ. ಪ್ರವೇಶಾತಿ ಮತ್ತು ಅರ್ಜಿಗಳಿಗೆ ಕಾವೇರಿ ವಿದ್ಯಾಸಂಸ್ಥೆ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು-23 ಇಲ್ಲಿಗೆ ಬೆಳಗ್ಗೆ 10 ರಿಂದ ಸಂಜೆ 5ರೊಳಗೆ ಭೇಟಿ ನೀಡಿ ಅರ್ಜಿ ಪಡೆದು ಮೇ 31 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 0821-4256549 ಅಥವಾ ಮೊ. 9448850502 ಸಂಪರ್ಕಿಸಬಹುದು.

ಪರಿಚಯ ತರಗತಿ

ಪ್ರಣವಯೋಗ ಮಂದಿರ ಟ್ರಸ್ಟ್ ಮೇ 23ರಂದು ಆಲ್ಫಾಮೈಂಡ್ ಪವರ್‌ನ ಉಚಿತ ಪರಿಚಯ ತರಗತಿ ಆರಂಭಿಸುತ್ತಿದೆ. ಪ್ರಣವ ಚಿಕಿತ್ಸಾ ಕೇಂದ್ರ, ನಂ. 576, 26ನೇ ಮುಖ್ಯರಸ್ತೆ, ಜೆ.ಪಿ. ನಗರ ಇಲ್ಲಿ ಮಧ್ಯಾಹ್ನ 1 ರಿಂದ 2ರವರೆಗೆ ಮತ್ತು ಸಂಜೆ 7 ರಿಂದ 8ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ. 9342273583 ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್