ಮೈಸೂರು

8ನೇ ತರಗತಿ ಪ್ರವೇಶಕ್ಕಾಗಿ ಪರೀಕ್ಷೆ

ಮೈಸೂರು: ಉತ್ತರಖಂಡ ರಾಜ್ಯದ ಡೆಹರಾಡೂನ್ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆ ಡಿ.1 ಮತ್ತು 2 ರಂದು ಬೆಂಗಳೂರಿನಲ್ಲಿ ನಡೆಯಲಿದೆ. 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ಜು.1 ರಂತೆ ಹನ್ನೊಂದೂವರೇ ವರ್ಷದಿಂದ 13 ವರ್ಷದೊಳಗಿರುವ ಬಾಲಕರು ಮಾತ್ರ ಈ ಪರೀಕ್ಷೆಗೆ ಅರ್ಹರು. ಭರ್ತಿ ಮಾಡಿದ ಅರ್ಜಿ ನಮೂನೆಯ ಎರಡು ಪ್ರತಿಗಳನ್ನು ಹಾಗೂ ಅದರ ಅಗತ್ಯ ಅಡಕಗಳನ್ನು ಲಗತ್ತಿಸಿ ಸೆ.30ರೊಳಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು-560025, ದೂ. 080-25589459 ಸಂಪರ್ಕಿಸಬಹುದು.
ಎಂಇಎಸ್ ಪುಂಡಾಟಿಕೆಗೆ ಜೆಡಿಎಸ್ ಖಂಡನೆ
ಮೈಸೂರು: ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ನಡೆಸಿರುವುದನ್ನು ಜೆಡಿಎಸ್ ಮುಖಂಡ ಬಸವರಾಜು ಖಂಡಿಸಿದ್ದಾರೆ. ಬೆಳಗಾವಿ ಎಂದೆಂದಿಗೂ ಕರ್ನಾಟಕದ ಆಸ್ತಿ. ಇದರ ಮೇಲೆ ಕಣ್ಣು ಹಾಕಿರುವ ಎಂಇಎಸ್ ಸಂಘಟನೆಯನ್ನು ಸರ್ಕಾರ ನಿಷೇಧಿಸಬೇಕು. ಯಳ್ಳೂರಿನಲ್ಲಿ ಮರಾಠಿ ನಾಮಫಲಕ ಅಳವಡಿಸುವ ಮೂಲಕ ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆ. ನಮ್ಮ ಔದಾರ್ಯವನ್ನು ಅವರು ದುರ್ಬಲ ಎಂದು ಭಾವಿಸಿದಂತಿದೆ. ಅದನ್ನು ಸುಳ್ಳು ಮಾಡಲು ರಾಜ್ಯ ಸರ್ಕಾರ ಕೂಡಲೇ ಸಂಘಟನೆಯನ್ನು ಗಡಿಪಾರು ಮಾಡಬೇಕು. ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ತಕ್ಕಶಾಸ್ತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಭೆ ಮುಂದೂಡಿಕೆ
ಮೈಸೂರು: ಶ್ರೀ ಕನ್ಯಕಾ ಪರಮೇಶ್ವರಿ ಕೋ- ಆಪರೇಟಿವ್ ಬ್ಯಾಂಕ್ ಲಿ. ವತಿಯಿಂದ ಆ.3 ರಂದು ನಗರದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯನ್ನು ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಪರಿಚಯ ಕಾರ್ಯಕ್ರಮ
ಮೈಸೂರು: ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆ.3ರ ಬೆಳಗ್ಗೆ 10.30ಕ್ಕೆ ನೂತನ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮ ಏರ್ಪಡಿಸಿದ್ದು, ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಭಾಗವಹಿಸುವರು.
ಮಹಾದ್ವಾರ ಸಮರ್ಪಣೆ
ಮೈಸೂರು: ಬಿಇಎಂಎಲ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಬೆಮೆಲ್ ನಗರದಲ್ಲಿ ನಿರ್ಮಿಸಿರುವ ಮಹಾದ್ವಾರದ ಸಮರ್ಪಣೆ ಸಮಾರಂಭವನ್ನು ಆ.3ರ ಬೆಳಗ್ಗೆ 11ಕ್ಕೆ ಏರ್ಪಡಿಸಿದ್ದು, ಬೆಮೆಲ್ ವ್ಯವಸ್ಥಾಪಕ ನಿರ್ದೇಶಕ ಪಿ. ದ್ವಾರಕನಾಥ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಕೆ. ಸೋಮಶೇಖರ್ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ನೀರಿನ ಸಂಪ್ ಮತ್ತು ಟ್ಯಾಂಕ್ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
ಆಯುರ್ವೇದ ಕಾರ್ಯಾಗಾರ
ಮೈಸೂರು: ಆರೋಗ್ಯ ಭಾರತೀ ಪ್ರಕೃತಿ ಆಯುರ್ವೇದ ಪ್ರತಿಷ್ಠಾನವು ನಗರದ ಗೋಪಾಲಸ್ವಾಮಿ ಕಾಲೇಜಿನಲ್ಲಿ ಆ.3 ರಂದು ಆರೋಗ್ಯ ರಕ್ಷಣೆಗಾಗಿ ಆಯುರ್ವೇದ ಕಾರ್ಯಾಗರ ಏರ್ಪಡಿಸಿದ್ದು, ಮೊ. 94482 07710 ಸಂಪರ್ಕಿಸಬಹುದು.
ಪ್ರೌಢಶಾಲಾ ಕ್ರೀಡಾಕೂಟ
ಮೈಸೂರು: ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿಜಯ ವಿಠಲ ವಿದ್ಯಾಶಾಲೆಯಿಂದ ಆ.3ರ ಬೆಳಗ್ಗೆ 8.30ಕ್ಕೆ ನಗರದ ಓವಲ್ ಮೈದಾನದಲ್ಲಿ ಪ್ರೌಢಶಾಲಾ ಕ್ರೀಡಾಕೂಟ ಏರ್ಪಡಿಸಿದ್ದು, ಎಸಿಪಿ ಪ್ರಭಾಕರ ಬಾರ್ಕಿ, ಆರ್. ವಾಸುದೇವ ಭಟ್, ಬಿ.ಎನ್. ಶಿವರಾಮೇಗೌಡ ಭಾಗವಹಿಸುವರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್