ಮೈಸೂರು

ತ್ಯಾಜ್ಯ ನಿರ್ವಹಣೆಗೆ ಅರಿವು

ಮಾ. ವೆಂಕಟೇಶ್
ಮೈಸೂರು:
ತ್ಯಾಜ್ಯ ಎಲ್ಲೆಂದರಲ್ಲಿ ಹಾಕಬೇಡಿ, ಇದು ಪರಿಸರಕ್ಕೂ, ಜನರ ಆರೋಗ್ಯಕ್ಕೂ ಮಾರಕ ಎಂಬಿತ್ಯಾದಿ ಸಂದೇಶ ಸಾರುವ ಫಲಕಗಳು ಶಾರದಾದೇವಿನಗರದ ಹಲವು ಕಡೆ ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಆದರೂ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ.
ಮನೆ ಮನೆಯ ಕಸವನ್ನು ಆಟೋ ಟಿಪ್ಪರ್ ಮೂಲಕ ಸಿಬ್ಬಂದಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲಮೊಮ್ಮೆ ಬಾರದ ದಿನ ಅಥವಾ ತಡವಾಗಿ ಬರುವಷ್ಟರಲ್ಲಿ ಕಸವನ್ನು ತಂದು ರಸ್ತೆಯ ಬದಿಗೋ, ಖಾಲಿ ಜಾಗಕ್ಕೋ ಅಥವಾ ಉದ್ಯಾನವನದ ಆವರಣದೊಳಗೋ ಸುರಿದು ಹೋಗುವ ಪ್ರವೃತ್ತಿಗಳನ್ನು ಇಲ್ಲವೆನ್ನುವಂತಿಲ್ಲ.
ಶಾರದಾದೇವಿನಗರದ ಮೂಲಕ ಬೋಗಾದಿ ರಸ್ತೆ ಸೇರುವ ಹಾಗೂ ವಸಂತನಗರದ ಹಿಂಭಾಗದ ಬಿಂದುವಿನ ಮೂಲಕ ಹೈಟೆನ್ಷನ್ ಮಾರ್ಗ ಹಾದು ಹೋಗಿದೆ. ಈ ತಾಣದಲ್ಲಿ ಸುತ್ತಮುತ್ತಲಿನ ನಿವಾಸಿಗಳು ತ್ಯಾಜ್ಯಗಳನ್ನು ತಂದು ಹಾಕುವ ಮೂಲಕ ವಾತಾವರಣವನ್ನು ಅನೈರ್ಮಲ್ಯಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ.    
ಪರಿಸರಕ್ಕೆ ಹಾನಿ: ಈ ಭಾಗದಲ್ಲಿ 4 ಕಡೆ ಕಸದ ತೊಟ್ಟಿಗಳನ್ನು ಇರಿಸಲಾಗಿದೆ. ಬಿಸಾಡುವ ಕಸವನ್ನು ಅಲ್ಲಿಗೆ ತಂದು ಹಾಕಬಹುದು. ಆದರೆ ಆ ಕೆಲಸವನ್ನು ಮಾಡದೆ, ಸಿಕ್ಕ ಸಿಕ್ಕ ಜಾಗದಲ್ಲಿ ಕಸ ಸುರಿದು ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ. ಪಾಲಿಕೆಯಿಂದ ಕಸ ಸಂಗ್ರಸಿಲು ಇರುವ ವಾಹನ ಬರುವವರೆಗೆ ಕಾದು ತ್ಯಾಜ್ಯವನ್ನು ನೀಡುವ ಕೆಲಸವನ್ನು ನಿವಾಸಿಗಳು ಮಾಡಬೇಕಿದೆ.
ಶಾರದಾದೇವಿನಗರ ಎಂಬ ಹೆಸರಿನ ವಾರ್ಡ್ ಸಂಖ್ಯೆ 22 ರ ವ್ಯಾಪ್ತಿಯು ಉತ್ತರಕ್ಕೆ ವರ್ತುಲ ರಸ್ತೆ ಸೇರುವ ಬೋಗಾದಿ ರಸ್ತೆ ಬಿಂದವಿನಿಂದ ಬೋಗಾದಿ ರಸ್ತೆಯ ಮೂಲಕ ಹೈಟೆನಕ್ಷನ್ ರಸ್ತೆವರೆಗೆ. ಅಲ್ಲಿಂದ ಹೈಟೆನ್ಷನ್ ರಸ್ತೆಯ ಮೂಲಕ ವಸಂತನಗರದ ಹಿಂಭಾಗದ ಬಿಂದುವರೆಗೆ. ಶಾರದದೇವಿನಗರ 4ನೇ ಮುಖ್ಯ ರಸ್ತೆಯ ಮೂಲಕ ಚದುರಂಗರಸ್ತೆಯ ಗಣೇಶ್ ಭಂಡಾರ ಮೂಲಕ ಟಿ.ಕೆ. ಬಡಾವಣೆಯ 4ನೇ ಹಂತದ 9ನೇ ಕ್ರಾಸ್ 4ನೇ ಮುಖ್ಯ ರಸ್ತೆಯವರೆಗೆ.
ಪೂರ್ವಕ್ಕೆ ಟಿ.ಕೆ. ಬಡಾವಣೆಯ 4ನೇ ಹಂತದ 4ನೇ ಮುಖ್ಯರಸ್ತೆ ಬಿಂದುವಿನಿಂದ ನ್ಯೂಕಾಂತರಾಜ ಅರಸ್ ರಸ್ತೆಯವರೆಗೆ. ಅಲ್ಲಿಂದ ಪಡುವಣ ರಸ್ತೆಯ ಕವಿತಾ ಸೋರ್ಟ್ಸ್‌ವರೆಗೆ. ಪಡುವಣ ರಸ್ತೆಯ ಮೂಲಕ ವಿಶ್ವಮಾನವ ಜೋಡಿರಸ್ತೆಯವರೆಗೆ. ದಕ್ಷಿಣಕ್ಕೆ ವಿಶ್ವಮಾನವ ಜೋಡಿರಸ್ತೆಯ ಪಡುವಣ ರಸ್ತೆ ಸೇರುವ ಬಿಂದುವಿನಿಂದ ವಿಶ್ವಮಾನವ ಜೋಡಿರಸ್ತೆ ಮೂಲಕ ಹೈಟೆನ್ಷನ್ ರಸ್ತೆವರೆಗೆ. ಅಲ್ಲಿಂದ ಹೈಟೆನ್ಷನ್ ರಸ್ತೆ ಮೂಲಕ ಚದುರಂಗ ಮತ್ತು ವಿವೇಕಾನಂದ ರಸ್ತೆ ಸೇರುವ ಬಿಂದುವಿನಿಂದ ವಿವೇಕಾನಂದ ರಸ್ತೆ ಮೂಲಕ ಆರ್‌ಕಿಡ್ ಶಾಲೆಯವರೆಗೆ. ಅಲ್ಲಿಂದ ಮಳೆ ನೀರು ಚರಂಡಿ ಮೂಲಕ ನಿವೇದಿತಾನಗರದ ರಿಂಗ್ ರಸ್ತೆಯವರೆಗೆ ಒಳಗೊಂಡಿದೆ.   
ಈ ಭಾಗದಲ್ಲಿ ಸುಮಾರು ಸುಮಾರು 15 ಸಾವಿರ ಜನಸಂಖ್ಯೆಯಿದ್ದು, ಸುಮಾರು 4000 ಕ್ಕೂ ಅಧಿಕ ಮನೆಗಳು ಹಾಗೂ 140ಕ್ಕೂ ಹೆಚ್ಚಿನ ಉದ್ದಿಮೆಗಳಿವೆ.
ಇಲ್ಲಿನ ರಸ್ತೆಗಳು, ಮೋರಿಗಳು ಹಾಗೂ ಮನೆಯ ಕಸದ ನಿರ್ವಹಣೆಗೆ ಒಟ್ಟು  24 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಏನೇನು ಸಾಲದು. ಮಾನವ ಸಂಪನ್ಮೂಲ ಹಾಗೂ ಮತ್ತಿತರ ಸವಲತ್ತುಗಳನ್ನು ಪಾಲಿಕೆ ಒದಗಿಸಿದಾಗ ಮಾತ್ರ ದೇಶದ ಎರಡನೇ ಸ್ವಚ್ಛತೆ ನಗರವೆಂದು ಖ್ಯಾತಿ ಗಳಿಸಿರುವ ಮೈಸೂರು ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬರಲು ಸಾಧ್ಯ.
ಕಸದ ಸಮಸ್ಯೆ ನಿವಾರಣೆಗೆ ಸಾರ್ವಜನಿಕರ ಪಾತ್ರ ಬಹುಮುಖ್ಯ. ಸ್ವಚ್ಛತೆಗಾಗಿ ನಿವಾಸಿಗಳಿಗೆ ಜಾಗೃತಿ ಮೂಡಿಸಲು ವಾರ್ಡ್‌ನಲ್ಲಿ ವಿವಿಧೆಡೆ ಫಲಕಗಳನ್ನು ಅಳವಡಿಸಲಾಗಿದೆ. ಮಾನವ ಸಂಪನ್ಮೂಲ, ವಾಹನ ಸೌಕರ್ಯ ಮುಂತಾದ ಸೌಲಭ್ಯ ಕಲ್ಪಿಸಿದಾಗ ಮತ್ತಷ್ಟು ಹೆಚ್ಚಿನ ಕೆಲಸ ಮಾಡಬಹುದು. ಶೂನ್ಯಕಸ ನಿರ್ವಹಣೆಗೆ ಜಾಗದ ಕೊರತೆಯಿದೆ. ಘಟಕದ ಸ್ಥಾಪನೆಗೆ ಯಾರಾದರೂ ಮುಂದೆ ಬಂದರೆ ಅಗತ್ಯ  ಸಹಕಾರ ನೀಡಲಾಗುವುದು.  
- ಜೆ.ಎಸ್. ಜಗದೀಶ್,  ವಾರ್ಡ್  22, ನಗರಪಾಲಿಕೆ ಸದಸ್ಯರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!