ಮೈಸೂರು

ಹೊಸ ಪ್ರಯೋಗಶೀಲತೆಯ 'ತ್ರಿಡಿ ಫಿಲ್ಟರಿಸಂ'

ಬೆಂಗಳೂರು: ಹೊಸ ಪ್ರಯೋಗಶೀಲತೆಯ 'ತ್ರಿಡಿ ಫಿಲ್ಟರಿಸಂ' ಕಲಾಕೃತಿ ಮೂಲಕ ಕಲಾವಿದ ಮೈಸೂರಿನ ವೆಸ್ಲಿ ತ್ಯಾಗರಾಜನ್ ತಮ್ಮ ಕಲಾ ಸಾಧನೆಯ ಹಾದಿಯನ್ನು ಬೆಂಗಳೂರಿನಲ್ಲಿ ಶನಿವಾರ ಅನಾವರಣಗೊಳಿಸಿದರು. 1997ರಲ್ಲಿ ಈ ಮಾದರಿಯ ಕಲಾಕೃತಿಗಳನ್ನು ಮೊದಲ ಬಾರಿಗೆ ಅಮೆರಿಕದಲ್ಲಿ ಪರಿಚಯಿಸಿದಾಗ  ಬೆರಗು ಕಣ್ಣಿನಿಂದ ನೋಡಿ ಮೆಚ್ಚಿ ಖರೀದಿಸಿದ್ದರು ಎಂದು ತ್ಯಾಗರಾಜನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಮ್ಮ ಹಲವು ಕಲಾಕೃತಿಗಳನ್ನು ಪ್ರೆಸ್‌ಕ್ಲಬ್‌ನ ಸಭಾಂಗಣದಲ್ಲಿ ಶನಿವಾರ ಪ್ರದರ್ಶಿಸಿ, ನನ್ನ ಚಿತ್ರಗಳ ಮಹತ್ವ ಅರ್ಥವಾಗಲು 2-3 ಬಗೆಯ ಕನ್ನಡಕಗಳನ್ನು ಹಾಕಿಕೊಳ್ಳಬೇಕೆಂದು ಹೇಳಿ ಪತ್ರಕರ್ತರ ವೀಕ್ಷಣೆಗೆ ಅನುವು ಮಾಡಿಕೊಟ್ಟರು. ನಂಜನಗೂಡಿನಲ್ಲಿ ನಾನು ಹುಟ್ಟಿದ್ದು, ಮೈಸೂರಲ್ಲಿ ಬೆಳೆದದ್ದು. ಎಂಜಿನಿಯರಿಂಗ್ ಕೋರ್ಸ್ ಬಿಟ್ಟು, ಸೈನ್ಸ್ ಓದಿದೆ. ಬಳಿಕ ಕಲೆಯ ಅಭ್ಯಾಸ ಮಾಡಿದೆ. ದೇಶ ವಿದೇಶಗಳ ಸುತ್ತಿದೆ. ಜಗತ್ತಿನ ಬಹುತೇಕ ಕಲಾಕೃತಿಗಳನ್ನು ಅಧ್ಯಯನ ಮಾಡಿದೆ. ಇವೆಲ್ಲಕ್ಕೂ ವಿಭಿನ್ನವಾಗಿ ನನ್ನ ಕಲಾಕೃತಿಗಳು ನಿಲ್ಲಬೇಕೆಂದು ತೀರ್ಮಾನಿಸಿ 'ತ್ರಿಡಿ ಫಿಲ್ಟರಿಸಂ' ಪ್ರಯೋಗ ಮಾಡಿ ಯಶಸ್ವಿಯಾಗಿರುವೆ ಎಂದರು.  
ವಸತಿ ಸಚಿವ ಅಂಬರೀಶ್ ಬಗ್ಗೆ 'ತ್ರಿಡಿ ಫಿಲ್ಟರಿಸಂ' ಕಲಾಕೃತಿಗಳನ್ನು ರಚಿಸಿದಾಗ ಪ್ರತಿಯೊಂದಕ್ಕೂ ರು. 2.5 ಲಕ್ಷದಂತೆ ಅಭಿಮಾನಿಗಳು ಖರೀದಿಸಿದರು. ಈ ವಿಷಯ ತಿಳಿದ ವಸತಿ ಸಚಿವ ಅಂಬರೀಶ್ ಸ್ವತಃ ನನ್ನನ್ನು ಭೇಟಿ ಮಾಡಿ ಅಭಿನಂದಿಸಿದ್ದರು ಎಂದರು.
ಕಲಾವೃತ್ತಿಯಲ್ಲಿ ಇಲ್ಲೇ ಉಳಿದು ಬೆಳೆಯುವ ಉದ್ದೇಶದಿಂದ ವಿದೇಶ ಬಿಟ್ಟು ಮೈಸೂರಿಗೇ ಬಂದಿರುವೆ. ಬಣ್ಣಗಳ ಜೊತೆ ಆಟವಾಡುವುದು ನನಗೆ ಅಚ್ಚುಮೆಚ್ಚು. ದಸರಾ ಉತ್ಸವದಲ್ಲೂ ನನ್ನ ಕಲಾಕೃತಿಗಳು  ಬಹುಮಾನ ಪಡೆದಿವೆ. ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿಯೂ ಬಂದಿವೆ ಎಂದರು.          


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್