ಮುದಗಲ್: ಪಟ್ಟಣದ ವಿವಿಧಡೆ 64 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು, ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಪಂಪಯ್ಯ ಮಠ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಹುಸೇನಸಾಬ, ರಾಮಣ್ಣ ಹಿರೇಮನಿ, ಆಶೋಕಗೌಡ ಪಾಟೀಲ್, ಅಮೀರಬೇಗ್ ಉಸ್ತಾದ, ಪೌಲರಾಜ, ಮುದಿವೀರಪ್ಪ ಜೀಡಿ, ಬಾಷುಮಿಯಾ, ಕರಿಯಪ್ಪ, ಎಸ್.ಆರ್. ರಸೂಲ್, ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ಸದಸ್ಯ ಪದ್ಮಾವತಿ ಯಾದವ್, ನೀಲಮ್ಮ ಗದ್ದಿ, ಎಂ.ಡಿ. ರಫಿ, ಗುಂಡಪ್ಪ ಜೀಡಿ ಭಾಗವಹಿಸಿದ್ದರು. ಪಿಎಸ್ಐ ಬಸವರಾಜ, ಸಿಬ್ಬಂದಿ ಧ್ವಜವಂದನೆ ಸಲ್ಲಿಸಿದರು.
ಧ್ವಜಾರೋಹಣ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ರಾಜೇಂದ್ರ ಮನಗೂಳಿ, ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ. ಬಸವರಾಜ, ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಅಧ್ಯಕ್ಷ ಶರಣಗೌಡ ಬಯ್ಯಾಪೂರ, ಉರ್ದು ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಎಸ್.ಆರ್. ರಸೂಲ್, ಮದರ್ ತೆರೆಸಾ ಶಾಲೆಯಲ್ಲಿ ಸಾದಿಕ್ ಅಲಿ ಧ್ವಜಾರೋಹಣ ಮಾಡಿದರು.