ರಾಯಚೂರು

ವಿಜಯದಶಮಿ: ಶಕ್ತಿದೇವತೆ ವಿಜೃಂಭಣೆಯ ಮೆರವಣಿಗೆ

ಲಿಂಗಸ್ಗೂರು: ವಿಜಯದಶಮಿ ನಿಮಿತ್ತ ಶಕ್ತಿ ದೇವತೆ ದುರ್ಗಾ ಪರಮೇಶ್ವರಿದೇವಿ ಮೂರ್ತಿಯನ್ನು ಸೋಮವಾರ ವಿವಿಧ ಕಲಾ ತಂಡಗಳ ಮೂಲಕ ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಕನ್ನಿಕಾ ಪರಮೇಶ್ವರಿ ದೇವಿಗೆ ಶಾಸಕ ಮಾನಪ್ಪ ವಜ್ಜಲ್ ಪೂಜೆ ಸಲ್ಲಿಸಿದರು.
ನಂತರ ಮಧ್ಯಾಹ್ನ ದಸರಾ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆ ಉತ್ಸವಕ್ಕೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಚಾಲನೆ ನೀಡಿದರು. ಗಡಿಯಾರ ಚೌಕ್, ದೊಡ್ಡ ಹನುಮಂತ ದೇವಸ್ಥಾನ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೇರಳದ ಮಹಿಳಾ ಕಲಾ ತಂಡದ ಸಿಂಗಾರಿ ಮೇಳ, ಅಕ್ಕಲಕೋಟದ ಲೇಜಿಮ್, ಗದಗಿನ ನಂದಿಕೋಲ ಕುಣಿತ ಮತ್ತು ಡೊಳ್ಳು ಕುಣಿತ, ಬಿಜಾಪುರದ ಕೀಲು ಕುದುರೆ ಮತ್ತು ಹೆಜ್ಜೆ ಮೇಳ, ಜಮಖಂಡಿಯ ಬ್ಯಾಂಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ವಿಶೇಷ ಪೂಜಾ ಕುಣಿತ, ಪಟ ಕುಣಿತ, ಸೋಮನ ಕುಣಿತ, ಕಂಸಾಳೆ ನೃತ್ಯ ತಂಡಗಳ ಮೂಲಕ ಬನ್ನಿ ಮಂಟಪದವರೆಗೆ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ಮುಖಂಡರಾದ ಶ್ರೀನಿವಾಸ ರಡ್ಡಿ ಮುನ್ನೂರ, ಮಲ್ಲಣ್ಣ ವಾರದ, ಮಂಜುನಾಥ ಕಾಮಿನ್, ಹೆಚ್.ಬಿ. ಮುರಾರಿ, ಡಾ. ಶರಣಗೌಡ ಪಾಟೀಲ್, ಅಮರಗುಂಡಪ್ಪ ಮೇಟಿ, ಭೂಪನಗೌಡ ಕರಡಕಲ್, ಶಿವಾನಂದ ಐದನಾಳ, ಡಾ. ಅಮರೇಶ ಯತಗಲ್, ಸೋಮಶೇಖರ ಐದನಾಳ, ಮನೋಹರರಡ್ಡಿ, ಭೀಮಪ್ಪ ನಾಯಕ, ಸಿ.ಶರಣಪ್ಪ, ವೀರೇಶ ಐದನಾಳ, ಪಿ.ಜಗದೀಶ, ಯಲ್ಲಪ್ಪ ಈಳಿಗೇರ, ರಮೇಶ ಯಾದವ, ರವಿಕುಮಾರ ಚೌಧರಿ, ಡಾ. ಎನ್.ಎಲ್.  ನಡುವಿನಮನಿ, ಪ್ರಲ್ಹಾದ್ ಶೆಟ್ಟಿ ಕೊಂಪಲ್, ಬಸವರಾಜಗೌಡ ಗಣೇಕಲ್, ರಾಜಶೇಖರ ವಕೀಲರು, ಟಿ.ಎಸ್. ಕುಮಾರಸ್ವಾಮಿ, ದೊಡ್ಡಬಸಪ್ಪ ಅಂಗಡಿ, ಸುಧೀರ ಕುಮಾರ ಶ್ರೀವಾತ್ಸವ, ನಾಗರಾಜ ತಿಪ್ಪಣ್ಣ ಸೇರಿನೂರಾರು ಜನರು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

SCROLL FOR NEXT