ಸಿಂಧನೂರು: ಶಿವಸೇನೆ, ಎಂಇಎಸ್ ಪುಂಡಾಟಿಕೆ ನಿಲ್ಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ವೀರೇಶ ಭಾವಿಮನಿ, ಕನ್ನಡ ಯುವಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ರವಾನಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದಲ್ಲಿ ಹೋರಾಟ ಮಾಡುವ ಕನ್ನಡಿಗರನ್ನು ಸರ್ಕಾರ ಬಂಧಿಸುತ್ತಲಿದೆ. ಆದರೆ ಮರಾಠಿಗರು, ಶಿವಸೇನೆ ಮತ್ತು ಎಂಇಎಸ್ ಮುಖಂಡರ ಪುಂಡಾಟಿಕೆ ಹತ್ತಿಕ್ಕಲು ಆಗುತ್ತಿಲ್ಲ. ಕನ್ನಡ ಧ್ವಜವನ್ನು ಸುಟ್ಟುಹಾಕಿರುವುದು, ಕನ್ನಡಿಗರನ್ನು ಅಪಮಾನ ಮಾಡುತ್ತಿರುವುದು, ಯಳ್ಳೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಗಡಿಭಾಗದ ಗ್ರಾಮಗಳನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದವೆಂದು ಘೋಷಣೆ ಮಾಡುತ್ತಿರುವುದು, ಕನ್ನಡ ಫಲಕಗಳನ್ನು ಕಿತ್ತಿಹಾಕಿರುವುದು ಮರಾಠಿಗರ ದೌರ್ಜನ್ಯ ಎತ್ತಿ ತೋರಿಸುತ್ತದೆ. ಶಾಸಕ ಸಾಂಬಾಜೀ ಪಾಟೀಲ ವರ್ತನೆ ಖಂಡನಾರ್ಹ. ಆತ ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಗಳ ಹಚ್ಚಲು ಮುಂದಾಗಿದ್ದಾನೆ. ಕೂಡಲೇ ಈತನನ್ನು ಬಂಧಿಸಬೇಕೆಂದು ಆಗ್ರಹಿಸಿದೆ ಎಂದು ತಿಳಿಸಿದ್ದಾರೆ.
ಮುಖಂಡರಾದ ಬಸವರಾಜ ಹೊಸಳ್ಳಿ, ಹನುಮಂತ, ಹುಸೇನಪ್ಪ ನಾಯಕ, ದೇವರಾಜ್, ರಾಘವೇಂದ್ರ ಕೆ., ಅಜಿತ್, ವಿಲಾಸ್, ಪ್ರಸಾದ್, ಪವನ, ಅಲಿ ಮತ್ತಿತರರು ಇದ್ದರು.
-