ಸಿಂಧನೂರು: ತಾಲೂಕಿನ ಮಾಡಸಿರವಾರ ಗ್ರಾಪಂನ ಗೋಮರ್ಸಿ ಮತ್ತು ಬೂದಿಹಾಳ ಗ್ರಾಮದಲ್ಲಿ ಸಮರ್ಪಕವಾಗಿ ಗ್ರಾಮ ಸಭೆ ನಡೆಸದೇ ಈಗಾಗಲೇ ಮನೆ ಹೊಂದಿರುವ ಅನರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ನೀಡುವ ಮೂಲಕ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರು ಅರ್ಹರಿಗೆ ವಂಚಿಸಿದ್ದಾರೆ ಎಂದು ಯುವ ಮುಖಂಡರಾದ ಬಸವರಾಜ ಗೋಮರ್ಸಿ, ಮರಿಯಪ್ಪ ಬೂದಿಬಾಳ, ವೀರೇಶ ಗೋಮರ್ಸಿ, ಬಲವೇಂದ್ರ ಬೂದಿಹಾಳ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, 2014- 15ನೇ ಸಾಲಿನ ಇಂದಿರಾ ಆವಾಸ್ ಯೋಜನೆಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವಲ್ಲಿ ಅಧ್ಯಕ್ಷರು ಹಾಗೂ ಪಿಡಿಒ ತಾರತಮ್ಯ ಮಾಡಿದ್ದಾರೆ. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿ ಮನೆಯಿಲ್ಲದ ಬಡವರಿಗೆ ಮನೆ ಮಂಜೂರು ಮಾಡುವಂತೆ ಮಾಡಿದ ಮನವಿಗೂ ಸ್ಪಂದಿಸದೆ ಮನಸೋಯಿಚ್ಛೆ ವರ್ತಿಸಿದ್ದಾರೆಂದು ದೂರಿದ್ದಾರೆ.ಏಪಕ್ಷೀಯವಾಗಿ ನಡೆಸಿರುವ ಆಯ್ಕೆ ಪಟ್ಟಿಯನ್ನು ಕೈಬಿಟ್ಟು ಪುನಃ ಗ್ರಾಮಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ನೀಡ ಬೇಕು. ಇಲ್ಲದಿದ್ದರೆ ಗ್ರಾಪಂ ಎದುರು ಗ್ರಾಮಸ್ಥರೆಲ್ಲರೂ ಸೇರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.