ಲಿಂಗಸ್ಗೂರು: ನಕಲಿ ಪ್ರಮಾಣ ಪತ್ರ ನೀಡಿ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡಿರುವುದಾಗಿ ಬೊಮ್ಮನಾಳ ತಾಂಡಾದ ಲಲಿತಾ ಚಂದಪ್ಪ ಎಂಬುವರು ನನ್ನ ಮೇಲೆ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪಾರ್ವತಿ ಮಹೇಶ ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬೊಮ್ಮನಾಳ ತಾಂಡಾ ಅಂಗನವಾಡಿ ಕೇಂದ್ರಕ್ಕೆ ಹೊಸದಾಗಿ ಕಾರ್ಯಕರ್ತೆ ಹುದ್ದೆ ನೇಮಕಕ್ಕೆ ಅರ್ಜಿ ಕರೆದಿದ್ದರು. ಈ ವೇಳೆ ನಾನು ಜಾತಿ ಮತ್ತು ವಾಸಸ್ಥಳ ಪ್ರಮಾಣ ಪತ್ರ ಪಡೆಯಲು ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದೆ. ನಾಗರಹಾಳ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಬೊಮ್ಮನಾಳ ತಾಂಡಾಕ್ಕೆ ಭೇಟಿ ನೀಡಿ ನನ್ನ ಇರುವಿಕೆ ಕುರಿತು ನನ್ನ ಮತ್ತು ನನ್ನ ಗಂಡನ ಸಮಕ್ಷಮ ವಿಚಾರಿಸಿದ್ದಾರೆ. ನಾನು ನನ್ನ ಗಂಡನ ಜೊತೆ ಹಾಜರಿದ್ದರೂ ಮುದಗಲ್ ಕಂದಾಯ ನಿರೀಕ್ಷಕರು ತಾಂಡಾದಲ್ಲಿ ವಾಸ್ತವ್ಯ ಇರುವುದಿಲ್ಲವೆಂದು ಸುಳ್ಳು ಪ್ರಕಟಣೆ ಮಾಡಿರುತ್ತಾರೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಜು.23ರಂದು ನನ್ನ ಎಲ್ಲ ದಾಖಲೆಗಳೊಂದಿಗೆ ನೇಮಕ ಅರ್ಜಿ ಸಲ್ಲಿಸಿದ್ದು, ಜು.30ರಂದು ತಮ್ಮ ಕಾರ್ಯಾಲಯದಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕ ಆದೇಶ ಪ್ರತಿ ಸೂಚನಾ ಫಲಕದ ಮೇಲೆ ಲಗತ್ತಿಸಲಾಗಿತ್ತು. ಆದರೆ ಲಲಿತಾ ಚಂದಪ್ಪ ಎಂಬುವರು ಸುಳ್ಳು ದಾಖಲಾತಿ ಲಗತ್ತಿಸಿ ನೇಮಕಾತಿಯಾಗಿರುವುದಾಗಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿರುತ್ತಾರೆ. ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ನಡೆಸಿದ್ದಾರೆಂದು ಮನವಿಯಲ್ಲಿ ದೂರಿದ್ದಾರೆ.
ಈ ವೇಳೆ ತಾಂಡಾದ ಕಿರಿಯಪ್ಪ ರಾಠೋಡ, ಭದ್ರಪ್ಪ ರಾಠೋಡ, ಮಹೇಶ, ಲೋಕೇಶ, ಸುರೇಶ, ಮಹಾಂತೇಶ, ಗಣೇಶ, ಪಾಂಡಪ್ಪ, ಶಂಕರ, ಚಾಂದಿಬಾಯಿ, ಭೀಮಮ್ಮ, ಗಂಗಮ್ಮ, ಸೀತಾರಾಮ್, ರವಿ ಸೇರಿದಂತೆ ಇದ್ದರು.