ಲಿಂಗಸ್ಗೂರು: ಮುದೇಬಿಹಾಳ ಘಟಕದ ಸಾರಿಗೆ ಬಸ್‌ನಲ್ಲಿ ಬಸ್‌ಪಾಸ್‌ವುಳ್ಳವರಿಗೆ ಚಾಲಕ, ನಿರ್ವಾಹಕರು ಅವಕಾಶ ನೀಡದ ಕಾರಣ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಜರುಗಿತು.
ಮುದ್ದೇಬಿಹಾಳ ಸಾರಿಗೆ ಘಟಕದ ಮುದ್ದೇಬಿಹಾಳ-ಮಂತ್ರಾಲಯ ಸಾರಿಗೆ ಬಸ್ ಲಿಂಗಸ್ಗೂರು ಮಾರ್ಗವಾಗಿ ಪ್ರತಿನಿತ್ಯ ಚಲಿಸುತ್ತದೆ. ಬುಧವಾರ ಬಸ್ ನಿಲ್ದಾಣಕ್ಕೆ ಆಗಮಿಸಿದ ವೇಳೆ ಕುಪ್ಪಿಗುಡ್ಡ, ಸರ್ಜಾಪುರ, ಪಾಮನಕೆಲ್ಲೂರು, ಕವಿತಾಳ ಸೇರಿದಂತೆ ಇತರೆ ಗ್ರಾಮಗಳ ವಿದ್ಯಾರ್ಥಿಗಳು ಲಿಂಗಸ್ಗೂರು ಪಟ್ಟಣದ ಶಾಲಾ-ಕಾಲೇಜು ಮುಗಿಸಿಕೊಂಡು ಪುನಃ ತಮ್ಮ ಗ್ರಾಮಗಳಿಗೆ ತೆರಳಲು ಬಸ್‌ನಲ್ಲಿ ಹತ್ತುತ್ತಿದ್ದಂತೆ ಚಾಲಕ, ನಿರ್ವಾಹಕರು ಬಸ್ ಪಾಸ್‌ಗೆ ಅವಕಾಶ ನೀಡುವುದಿಲ್ಲ. ಎಲ್ಲರೂ ಕೆಳಕ್ಕೆ ಇಳಿಯಿರಿ ಎಂದು ಹೇಳಿದ್ದಾರೆ.
ಇದಕ್ಕೆ ವಿದ್ಯಾರ್ಥಿಗಳು, ರಾಜ್ಯದ ವಿವಿಧ ಘಟಕಗಳ ಕೆಲ ಸಾರಿಗೆ ಬಸ್‌ಗಳು ಬಸ್‌ಪಾಸ್‌ವುಳ್ಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸಬಾರದೆಂದು ಹೊರರಾಜ್ಯದ ನಾಮಫಲಕ ಹಾಕಲಾಗುತ್ತದೆ. ಆದರೆ ಅಂತಹ ಕೆಲವು ಸಾರಿಗೆ ಬಸ್‌ಗಳು ಹೊರರಾಜ್ಯಕ್ಕೆ ತೆರಳುವುದಿಲ್ಲ. ಪ್ರತಿನಿತ್ಯ ಇಂತಹ ಬಸ್‌ಗಳಿಂದ ನಾವುಗಳು ಪರದಾಡುವಂತಾಗಿದೆ. ನಮ್ಮನ್ನು ಬಸ್‌ನಲ್ಲಿ ಕರೆದುಕೊಂಡು ಹೋಗುವವರೆಗೆ ಬಸ್ ಮುಂದೆ ಹೋಗಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.
ನಂತರ ಬಸ್ ನಿಲ್ದಾಣ ಸಂಚಾರಿ ನಿಯಂತ್ರಕರು ಹಾಗೂ ವಿಭಾಗೀಯ ಅಧಿಕಾರಿಗಳ ಸೂಚನೆ ಮೇರೆಗೆ ಚಾಲಕ, ನಿರ್ವಾಹಕರು ಬಸ್‌ಪಾಸ್‌ವುಳ್ಳ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಯಿತು.