ರಾಯಚೂರು

ಸೌಹಾರ್ದ ಜೀವನದಿಂದ ಸಾಮಾಜಿಕ ಶಾಂತಿ

ಸಿಂಧನೂರು: ಸೌಹಾರ್ದಯುತ ಜೀವನದಿಂದ ಸಾಮಾಜಿಕ ಶಾಂತಿ ದೊರಕುತ್ತದೆ. ಮನಸ್ಸು ಮಲೀನವಾಗದಂತೆ ತಡೆಯಲು ಸದಾ ಇಂತಹ ಸಂಸ್ಕಾರದ ಸಭೆಗಳಲ್ಲಿ ಭಾಗವಹಿಸಬೇಕು ಎಂದು ಸ್ಥಳೀಯ ಬಸವ ಕೇಂದ್ರದ ಹಿರಿಯ ಅನುಭಾವಿ ವೀರೇಶಪ್ಪ ಸಿರಗುಂಪಿ ಹೇಳಿದರು.
ನಗರದ ಕನಕ ಸಂಸ್ಕಾರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕನಕಾರಾಧನೆ-34ನೇ ಧಾರ್ಮಿಕ ಕಾರ್ಯಕ್ರಮ, ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಎಸ್.ಶರಣೇಗೌಡರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಬಟ್ಟೆ ಕೊಳೆಯಾದರೆ ಮಡಿವಾಳರಿಗೆ ಕೊಟ್ಟು ಸ್ವಚ್ಛಗೊಳಿಸಬಹುದು, ಮಂಡೆ ಮಾಸಿದರೆ ಸ್ವಚ್ಛಗೊಳಿಸಿಕೊಳ್ಳಬಹುದು. ಆದರೆ ಮನಸ್ಸು ಮಾಸಿದರೆ ಶಿವಶರಣರ ಅನುಭಾವದ ನುಡಿಗಳನ್ನು ಹಂಚಿಕೊಂಡು ಅದರಂತೆ ಜೀವನ ಸಾಗಿಸಿದರೆ ಒಳಿತಾಗುವುದು ಎಂದು ತಿಳಿಸಿದರು.
ಭಕ್ತ ಕನಕದಾಸರ 'ನಿನ್ನಂತೆ ಎಲ್ಲರ ನೋಡು..' ಎನ್ನುವ ಸಾಲಿನ ಮಹತ್ವ ತಿಳಿಸಿ, ಸಮಾಜದಲ್ಲಿ ಶಾಂತಿ, ನೆಮ್ಮದಿ ಎಲ್ಲರಿಗೂ ದೊರೆಯಬೇಕಾದರೆ ಪರಸ್ಪರರು ಸೌಹಾರ್ದತೆಯಿಂದ ಜೀವನ ಸಾಗಿಸಬೇಕಾದರೆ ನಮ್ಮಂತೆ ಎಲ್ಲರನ್ನು ಕಾಣಬೇಕೆಂದು ಕರೆ ನೀಡಿದರು.
ಉತ್ತಮ ಕಾರ್ಯನಿರ್ವಹಿಸುವೆ: ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಎಸ್.ಶರಣೇಗೌಡ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ನಗರ ಸೌಂದರ್ಯಕ್ಕೆ ಎಲ್ಲರ ಸಹಕಾರದೊಂದಿಗೆ ಉತ್ತಮ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಸಮಾಜ ಸೇವಕ ಅಜಿತ್ ಓಸ್ತವಾಲ್ ಮಾತನಾಡಿ, ಕನಕ ಸಂಸ್ಕಾರ ಬಳಗದ ಕನಕಾರಾಧನೆ ಕಾರ್ಯಕ್ರಮಗಳು ನಿರಂತರವಾಗಿ ಸಾಗಲಿ ಎಂದರು. ನಂಜುಂಡಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಹಿರಿಯ ಮುಖಂಡ ಶ್ಯಾಮಣ್ಣ ಎಸ್‌ಎಎಸ್ ಉದ್ಘಾಟಿಸಿದರು. ಹಿರಿಯ ಮುಖಂಡ ರಮೇಶಪ್ಪ ಸಾಹುಕಾರ ದಿದ್ದಗಿ ಅಧ್ಯಕ್ಷತೆ ವಹಿಸಿದ್ದರು.
ತಿಮ್ಮಪ್ಪ ಹಾಗೂ ಶಿಕ್ಷಕ ಕೆ.ಬಾಳಪ್ಪ ಪ್ರಾರ್ಥಿಸಿದರು. ನಾರಾಯಣಪ್ಪ ಮಾಡಶಿರವಾರ ತತ್ವಪದಗಾಯನ ಮಾಡಿದರು. ವರ್ತೂರು ಪ್ರಕಾಶ ಸೇನೆಯ ತಾಲೂಕಾಧ್ಯಕ್ಷ ಬಿ.ಹನುಮೇಶ ಸ್ವಾಗತಿಸಿದರು. ಕನಕ ಸಂಸ್ಕಾರ ಬಳಗದ ಸಂಚಾಲಕ ಬಸವರಾಜ ಗೋಡಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಹನುಮಂತಪ್ಪ ಬೇರ್ಗಿ ಕಾರ್ಯಕ್ರಮ ನಿರೂಪಿಸಿದರು. ಕವಿ ಪಂಪಯ್ಯಸ್ವಾಮಿ ಸಾಲಿಮಠ ವಂದಿಸಿದರು.
ಹಿರಿಯ ಪೂಜಾರಿ ಹೊಸಗೇರಪ್ಪ, ಕನಕ ಗುರುಪೀಠದ ತಾಲೂಕಾಧ್ಯಕ್ಷ ಟಿ.ಹನುಮಂತಪ್ಪ, ಕಟ್ಟೆಪ್ಪ ಗುಂಜಳ್ಳಿ, ಬಿ.ಸುಬ್ರಮಣ್ಯ ಉಪಸ್ಥಿತರಿದ್ದರು. ಕೊರಮ ಸಮಾಜದ ಹಿರಿಯ ಸಂಗಪ್ಪ ಜಾಧವ್, ಯುವ ಮುಖಂಡರಾದ ಆರ್.ಸಿ.ಪಾಟೀಲ್, ಎಸ್.ಬಿ. ತಿಮ್ಮಣ್ಣ ವಾಲೇಕಾರ, ವೆಂಕಟೇಶ ಬಾದರ್ಲಿ ಇತರರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ