ರಾಯಚೂರು

ನ್ಯಾಯ ಕೋರಿ ಹೈಕೋರ್ಟ್‌ಗೆ ಮೊರೆ

ರಾಯಚೂರು: ನಗರಸಭೆ ಸದಸ್ಯರು ಮೀಸಲಾತಿ ನಿಯಮಕ್ಕೆ ವಿರುದ್ಧವಾಗಿ ಅವಿಶ್ವಾಸ ಮಂಡಿಸಿ ತಮ್ಮನ್ನು ಪದಚ್ಯುತಗೊಳಿಸಿದ್ದಾರೆ. ಅವರ ನಿರ್ಧಾರದ ವಿರುದ್ಧ ಶೀಘ್ರವೇ ಹೈಕೋರ್ಟಿನಲ್ಲಿ ನ್ಯಾಯಕೋರಿ ದೂರು ದಾಖಲಿಸುವುದಾಗಿ ನಗರಸಭೆಯ ಪದಚ್ಯುತ ಅಧ್ಯಕ್ಷೆ ಮಹಾದೇವಿ ನಾಯಕ ಹೇಳಿದರು.
ನಗರಸಭೆಯಲ್ಲಿ ಅವಿಶ್ವಾಸ ಅಂಗೀಕಾರವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ತಾವೊಬ್ಬರೇ ಮೀಸಲಾತಿ ಅಡಿ ಅರ್ಹತೆ ಪಡೆದು ಆಯ್ಕೆಯಾಗಿದ್ದು ಸದಸ್ಯರಿಗೆ ಸಹನೆಯಾಗಿಲ್ಲ. ಅದರಿಂದಾಗಿಯೇ ತಮ್ಮ ವಿರುದ್ಧ ಸಲ್ಲದ ದೂರು ಹೇಳಿ ಅವಿಶ್ವಾಸ ವ್ಯಕ್ತಪಡಿಸಿದ್ದಾರೆಂದು ಟೀಕಿಸಿದರು.
ಮೊದಲಿನಿಂದಲೂ ಅಸಹಕಾರ: ಸಂವಿಧಾನಿಕವಾಗಿ ತಮಗೆ ದೊರೆತ ಹುದ್ದೆಯಿಂದ ಕೆಳಗಿಳಿಸುವಲ್ಲಿ ಹಿರಿಯ ಸದಸ್ಯರ ಹುನ್ನಾರ ಅಡಗಿದೆ. ತಾವು ಅಧ್ಯಕ್ಷೆಯಾಗಿ ಆಯ್ಕೆಯಾಗಲು ಸದಸ್ಯರು ಕಾರಣರಲ್ಲ. ಪರಿಶಿಷ್ಟ ಪಂಗಡದ ಮಹಿಳೆಗೆ ಅನಾಯಾಸವಾಗಿ ಒದಗಿದ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲು ಮೊದಲಿನಿಂದಲೂ ಹಿರಿಯ ಸದಸ್ಯರು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.
ಸದಸ್ಯರು ತಮಗೆ ಸಾಕಷ್ಟು ತೊಂದರೆ ನೀಡಿದ್ದಾರೆ. ಅಧಿಕಾರಿಗಳು ತಮಗೆ ಸರ್ಕಾರದ ವಾಹನ ಒದಗಿಸಿಲ್ಲ. ಇಷ್ಟೆಲ್ಲ ಸಮಸ್ಯೆಗಳನ್ನು ಒಡ್ಡಿದರೂ ತಾವು ಸಂಕಷ್ಟದ ಮಧ್ಯೆಯೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಉತ್ತಮವಾಗಿಯೇ ಕಾರ್ಯನಿರ್ವಹಿಸಿದರೂ ಅನಗತ್ಯ ಗೊಂದಲ ಎಬ್ಬಿಸುವ ಕಾರ್ಯ ಸದಸ್ಯರು ಮಾಡಿದ್ದಾರೆ. ಮಹಿಳೆಯು ಆಡಳಿತ ನಡೆಸುವುದು ಸದಸ್ಯರಿಗೆ ಸಹನೆಯಾಗಲಿಲ್ಲ. ಹಾಗಾಗಿ ಅವಿಶ್ವಾಸ ವ್ಯಕ್ತಪಡಿಸಿದ್ದಾರೆಂದು ದೂರಿದರು.
ನಗರಸಭೆಯಲ್ಲಿ ನಡೆದ ಅವಿಶ್ವಾಸ ಸಭೆಯ ಗೊತ್ತುವಳಿಯ ಸಂಪೂರ್ಣ ಮಾಹಿತಿ ಪಡೆದು ಹೈಕೋರ್ಟಿನ ಮೊರೆ ಹೋಗಲಾಗುತ್ತದೆ. ತಮಗೆ ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!