ರಾಯಚೂರು

ಮಾಡಸಿರವಾರ: ವಸತಿ ಫಲಾನುಭವಿಗಳ ಆಯ್ಕೆ

ಸಿಂಧನೂರು: ತಾಲೂಕಿನ ಮಾಡಸಿರವಾರ ಗ್ರಾಪಂ ವ್ಯಾಪ್ತಿಗೊಳಪಡುವ ವಿವಿಧ ವಾರ್ಡ್‌ಗಳಲ್ಲಿ ವಿವಿಧ ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಮಾಡಸಿರವಾರ ಗ್ರಾಮದ ಕರಿಯಪ್ಪ ತಾತ ಗುಡಿಯಲ್ಲಿ ಈ ಹಿಂದೆ ಗ್ರಾಮಸಭೆಯಲ್ಲಿ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಲಾಯಿತು. ಗೋಮರ್ಸಿ ಗ್ರಾಮದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಘರ್ಷಣೆಯುಂಟಾದ ಪ್ರಯುಕ್ತ ಅಲ್ಲಿಯ ನಾಲ್ಕು ಜನ ಸದಸ್ಯರ ಅನುಮತಿಯ ಮೇರೆಗೆ ಅಲ್ಲಿಯ ಫಲಾನುಭವಿಗಳ ಯಾದಿಯನ್ನು ಅಂತಿಮಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಸವ ಯೋಜನೆಯಲ್ಲಿ 20, ಇಂದಿರಾ ಆವಾಸ್ ಯೋಜನೆಯಲ್ಲಿ 12 ಫಲಾನುಭವಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಕಳೆದ 3 ವರ್ಷಗಳಿಂದ ಕರ ವಸೂಲಿ ಮಾಡುತ್ತಿರುವ ಹುಲುಗಪ್ಪ ಹಳ್ಳಪ್ಪ ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ ಇತರೆ ಅಭಿವೃದ್ಧಿ ಕೆಲಸಗಳಲ್ಲಿಯೂ ಅವರನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸಲು ಅವಕಾಶ ನೀಡಬೇಕು. ಇನ್ನು ಹೆಚ್ಚುವರಿಯಾಗಿ ಶೇ.15ರಷ್ಟು ಕಮಿಷನ್ ಹೆಚ್ಚಿಸಿ ಮಾಸಿಕ 2000 ವೇತನ ನೀಡಬೇಕೆಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ವಿರುಪಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗಂಗಮ್ಮ ಪಂಪಾಪತಿ, ಸದಸ್ಯರಾದ ರಮೇಶ, ಮಲ್ಲಮ್ಮ, ಜಿಲಾನಿಪಾಷಾ, ಆರತೆಮ್ಮ, ಶಿವರಾಯಪ್ಪ, ಹನುಮಮ್ಮ, ಹನುಮಂತಪ್ಪ, ಶಂಕ್ರಮ್ಮ, ನಾಗಮ್ಮ, ಬಸನಗೌಡ ಇದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್