ಶಿವಮೊಗ್ಗ: ಭದ್ರಾವತಿಯ ಆಕಾಶವಾಣಿ 5ರಂದು ಬೆಳಿಗ್ಗೆ 9.10ಕ್ಕೆ ಸಹ್ಯಾದ್ರಿ ನಾರಾಯಣ ಹೃದಯಾಲಯ ಆರೋಗ್ಯ ಭಾಗ್ಯ ನೇರ ಪೋನ್ ಇನ್ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಸುಧೀರ್ ಭಟ್ ಪಾಲ್ಗೊಳ್ಳಲಿದ್ದು, ಕೇಳುಗರ ಪ್ರಶ್ನೆಗೆ ಉತ್ತರಿಸಲಿದ್ದಾರೆ. ಪ್ರತಿ ಮಂಗಳವಾರ ಬೆಳಿಗ್ಗೆ 9.10ರಿಂದ 9.40ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ವಿಷಯ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಭದ್ರಾವತಿ ಆಕಾಶವಾಣಿ ತಿಳಿಸಿದೆ. ವಿವರಗಳಿಗಾಗಿ- 08282-270282.
ನಾಳೆ ಸಭೆ
ಶಿವಮೊಗ್ಗ: ರಾಜ್ಯ ಒಕ್ಕಲಿಗರ ಜಾಗೃತ ಹೋರಾಟ ವೇದಿಕೆ 3ರಂದು ಬೆಳಿಗ್ಗೆ 10.30ಕ್ಕೆ ಗಾಂಧಿಬಜಾರ್ನ ಗುರುಚಿತ್ರ ಮಂದಿರದಲ್ಲಿ ಚಿಂತನ- ಮಂಥನ ಸಭೆ ಏರ್ಪಡಿಸಿದೆ. ಸಭೆಗೆ ಸಮುದಾಯದ ಎಲ್ಲಾ ಮುಖಂಡರು ಮತ್ತು ಸದಸ್ಯರು ಪಾಲ್ಗೊಳ್ಳುವಂತೆ ಜಿಲ್ಲಾ ಅಧ್ಯಕ್ಷ ಗೋವಿಂದಪ್ಪ ತಿಳಿಸಿದ್ದಾರೆ.
ಇಂದು ಸಂಭ್ರಮದ ಕನಕ ಜಯಂತಿ
ಶಿವಮೊಗ್ಗ: ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ಕಚೇರಿಯಲ್ಲಿ 2ರಂದು ಕನಕದಾಸರ ಜಯಂತಿಯನ್ನು ಆಚರಿಸಲು ತೀರ್ಮಾನಿಸಿದೆ. ಬೆಳಿಗ್ಗೆ 8ಗಂಟೆಗೆ ಕನಕದಾಸ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರವಿದ್ದು, ರಾತ್ರಿ 8.30ಕ್ಕೆ ವಿನೋಬನಗರದ ಪೊಲೀಸ್ ಚೌಕಿ ವೃತ್ತದಿಂದ ಗೋಪಿ ವೃತ್ತದ ಮೂಲಕ ನಗರದ ವಿವಿಧ ರಸ್ತೆಗಳಲ್ಲಿ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ರ್ಯಾಲಿಗೆ ಚಾಲನೆ ನೀಡುವರು. ಆದ್ದರಿಂದ ನಗರದ ವಿವಿಧ ಸಂಘ, ಸಂಸ್ಥೆ ಸದಸ್ಯರು, ಸಾರ್ವಜನಿಕರು, ಬಾಂಧವರು ಪಾಲ್ಗೊಳ್ಳುವಂತೆ ಅಧ್ಯಕ್ಷ ಸಿ.ಎಚ್. ಮಾಲತೇಶ್ ತಿಳಿಸಿದ್ದಾರೆ.
ಯೋಗ ಶಿಬಿರ
ಶಿವಮೊಗ್ಗ: ಕುಸುಮ ಹೋಲಿಸ್ಟಿಕ್ ಹೆಲ್ತ್ಕೇರ್ ಕನ್ಸಲ್ಟೇಷನ್ಸ್ 3, 10, 17 ಮತ್ತು 24 ರಂದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅಧ್ಯಯನ ಮಾಹಿತಿ ಶಿಬಿರ ಮತ್ತು ಯೋಗ ಚಿಕಿತ್ಸಾ ಸಲಹಾ ಶಿಬಿರ ಏರ್ಪಡಿಸಿದೆ. ಪ್ರತಿ ಭಾನುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1ಗಂಟೆ ವರೆಗೆ 10 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಆದ್ದರಿಂದ ಆಸಕ್ತರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಡಾ.ಕೆ.ಎಂ. ವಿನೋದ್ ಕುಮಾರ್ ತಿಳಿಸಿದ್ದಾರೆ. ವಿವರಗಳಿಗಾಗಿ- 9480589470.