ಶಿವಮೊಗ್ಗ: ತಾಲೂಕಿನಲ್ಲಿ ಭಾನುವಾರ ಭರಪೂರ ಯೋಜನೆ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿತು.
ಡಿಸಿಎಂ ಈಶ್ವರಪ್ಪ, ಸಭಾಪತಿ ಡಿ.ಎಚ್. ಶಂಕರಮೂರ್ತಿಯವರ ಸಮ್ಮುಖದಲ್ಲಿ ಸಿಎಂ ಶೆಟ್ಟರ್ ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 12 ಯೋಜನೆ ಉದ್ಘಾಟಿಸಿದರೆ, 8 ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಆಯನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 8 ಯೋಜನೆ ಉದ್ಘಾಟನೆ, 11 ಕಾಮಗಾರಿ ಶಂಕುಸ್ಥಾಪನೆ ಮಾಡಿದರು.
ಉದ್ಘಾಟನೆಯಾದವು: ರೈಲ್ವೆ ಮೇಲ್ಸೇತುವೆ, ಪಶು ವೈದ್ಯಕೀಯ ಕಾಲೇಜು ಕಟ್ಟಡ, ಕರ್ನಾಟಕ ಹೌಸಿಂಗ್ ಬೋರ್ಡ್ ಕಟ್ಟಡ, ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ, ಸಹಕಾರ ಸಂಘದ ಉಪ ನಿಬಂಧಕರ ಕಚೇರಿ, ಶಾಂತಿ ನಗರ ಸಮುದಾಯ ಭವನ, ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿ, ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಕಟ್ಟಡ, ಸ್ತ್ರೀಶಕ್ತಿ ಭವನ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಕಟ್ಟಡ, ನೆಹರೂ ರಸ್ತೆ (ಕಾಂಕ್ರಿಟ್ ರಸ್ತೆ) ಉದ್ಘಾಟನೆಗೊಂಡ ಶಿವಮೊಗ್ಗ ನಗರಕ್ಕೆ ಸಂಬಂಧಪಟ್ಟ ಯೋಜನೆಗಳು.
ಶಂಕುಸ್ಥಾಪನೆಗೊಂಡವು: ಬೊಮ್ಮನಕಟ್ಟೆ ಎಚ್ ಬ್ಲಾಕ್ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ, ನಿರಂತರ ಕುಡಿಯುವ ನೀರು ಸರಬರಾಜು, ಶುದ್ಧೀಕರಣ ಘಟಕ, ತುಂಗಾ ನದಿಗೆ ರಕ್ಷಣಾ ಗೋಡೆ, ಶುದ್ಧ ತುಂಗಾ ಯೋಜನೆ ಅಡಿ ಕೊಳವೆ ಬಾವಿ, ನೀರು ಶುದ್ಧೀಕರಣ ಘಟಕ ನವೀಕರಣ, ಶಿವಮೊಗ್ಗ-ಹೊನ್ನಾಳಿ ರಾಜ್ಯ ಹೆದ್ದಾರಿ ನಾಲ್ಕು ಪಥ ರಸ್ತೆ ಕಾಮಗಾರಿ, ಬಾಬು ಜಗಜೀವನ ರಾಂ ಭವನಕ್ಕೆ ಶಂಕುಸ್ಥಾಪನೆ ನೆರವೇರಿತು.
ಆಯನೂರಲ್ಲಿ: ಎಸ್ಸಿಪಿ ಮತ್ತು ಟಿಎಸ್ಪಿ ರಸ್ತೆಗಳು, ಪುರದಾಳು ಪಶುವೈದ್ಯ ಆಸ್ಪತ್ರೆ ಕಟ್ಟಡ, ಹಾರ್ನಳ್ಳಿ, ಚೋರಡಿ ಮತ್ತು ಹೊಳಲೂರು ಆಸ್ಪತ್ರೆ, ಕೃಷಿ ಮತ್ತು ತೋಟಗಾರಿಕಾ ವಿವಿ ಕಟ್ಟಡ, ರೈತ ಸಂಪರ್ಕ ಕೇಂದ್ರ, ಹಂಚಿನ ಸಿದ್ದಾಪುರ ಮತ್ತು ಸಿರಿಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ, ಹಕ್ಕಿಪಿಕ್ಕಿ ಕ್ಯಾಂಪ್ ಆಶ್ರಮ ಶಾಲೆ ಉದ್ಘಾಟನೆಗೊಂಡರೆ, ತುಂಗಾ ಏತನೀರಾವರಿ, ಹೊಳಲೂರು ಎಸ್.ಕೆ. ಮಗ್ಗಿ ಸೇತುವೆ, ಆಯನೂರು ಪ್ರವಾಸಿ ಮಂದಿರ ಕಟ್ಟಡ, ಆಯನೂರು ಕೋಹಳ್ಳಿ ಸಂಸ್ಕೃತಿ ಮಂದಿರ, ಆಯನೂರು-ಕುಂಸಿ-ಹೊಳಲೂರು ಅಂಬೇಡ್ಕರ್ ಭವನ, ಹಾರ್ನಳ್ಳಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಬಹುಗ್ರಾಮ ಕುಡಿವ ನೀರು ಕಾಮಗಾರಿ, ಆಯನೂರು ಪ್ರಾದೇಶಿಕ ವಿಜ್ಞಾನ ಉಪ ಕೇಂದ್ರ, ಸುವರ್ಣ ಗ್ರಾಮ ಯೋಜನೆ ಮತ್ತು ವಿವಿಧ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.