ಶಿವಮೊಗ್ಗ

ಕುಂಕುಮವಿಟ್ಟು ಸೀರೆ ಹಂಚಿಕೆ

ಹೊಸನಗರ: ಚುನಾವಣೆ ಇನ್ನು ದೂರವಿದ್ದರೂ ಕೀಳು ಮಟ್ಟದ ರಾಜಕಾರಣ ನಡೆಸುತ್ತಿರುವ ಕೆಜೆಪಿ ಮುಖಂಡರು  ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ದೇವರ ಚಿತ್ರ, ಕುಂಕುಮವಿಟ್ಟು ಸೀರೆ ಹಂಚಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ, ತಾಪಂ ಪ್ರಭಾರ ಅಧ್ಯಕ್ಷೆ ಗೀತಾ ನಿಂಗಪ್ಪ ಆರೋಪಿಸಿದ್ದಾರೆ.
ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕೆಜೆಪಿ ನಾಯಕರು ಹಂಚಿದರು ಎನ್ನಲಾದ ಸೀರೆ,  ಕುಂಕುಮ, ದೇವರ ಚಿತ್ರ ಪ್ರದರ್ಶಿಸಿ ಮಹಿಳೆಯರನ್ನು ಓಲೈಸಲು ಹೀನ ವರ್ತನೆ ತೋರುತ್ತಿದ್ದಾರೆಂದು ತೀವ್ರವಾಗಿ ಖಂಡಿಸಿದರು.
ಮಹಿಳಾ ಸಮಾವೇಶ: ಫೆ.26ರಂದು ಕಾಂಗ್ರೆಸ್ ಪಕ್ಷದಿಂದ ತೀರ್ಥಹಳ್ಳಿಯಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ರಾಜಿನಾಮೆ ನೀಡಲಿ: ಇತ್ತೀಚೆಗೆ ಜಯನಗರದಲ್ಲಿ ನಡೆದ ತಾಲೂಕು ಮಟ್ಟದ ಯುವಜನಮೇಳವನ್ನು ಕೆಜೆಪಿ ಮೇಳವಾಗಿ ಮಾಡಿದ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ ಎಂದು ಯುವಕಾಂಗ್ರೆಸ್ ಅಧ್ಯಕ್ಷ ಹಾಲಗದ್ದೆ ಉಮೇಶ ಆಗ್ರಹಿಸಿದ್ದಾರೆ.
ಯುವಜನಮೇಳದ ಸಮಾರೋಪದ ನಿಗದಿತ ಸಮಯಕ್ಕೆ ಶಾಸಕ ಕಿಮ್ಮನೆ, ಜಿಪಂ ಸದಸ್ಯೆ, ತಾಪಂ ಅಧ್ಯಕ್ಷರು ಆಗಮಿಸಿದ್ದರು ಕೂಡ ವಿನಾಕಾರಣ ಕಾಯಿಸಿ ಕೆಜೆಪಿ ನಾಯಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಬರುವತನಕ ಕಾರ್ಯಕ್ರಮ ವಿಳಂಬ ಮಾಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸದಸ್ಯೆ ಪೂರ್ಣಿಮಾ, ಕಾಂಗ್ರೆಸ್ ಪ್ರಮುಖರಾದ ಕೋಡೂರು ಚಂದ್ರಮೌಳಿ, ಎರಗಿ ಉಮೇಶ, ನೋರಾ ಮೆಟಿಲ್ಡ್ ಸಿಕ್ವೇರಾ, ಜಯನಗರ ಗುರು, ಜುಬೇದ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ