ಶಿವಮೊಗ್ಗ: ನಗರದಲ್ಲಿ ನಿರ್ಮಾಣಗೊಂಡ ಮಾಂಸಹಾರಿ ಫುಡ್ಕೋರ್ಟ್ಗೆ ನಗರಸಭೆ ಅಧ್ಯಕ್ಷ ಚನ್ನಬಸಪ್ಪ ಗುರುವಾರ ಚಾಲನೆ ನೀಡಿದರು.
ಸುಸಜ್ಜಿತ 14 ಮಳಿಗೆಗಳು, ವಾಹನ ಪಾರ್ಕಿಂಗ್, ನೀರಿನ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನೊಳಗೊಂಡ ಫುಡ್ಕೋರ್ಟ್ ಇದಾಗಿದೆ.
ಉದ್ಘಾಟನೆ ನಂತರ ಮಾತನಾಡಿದ ಚನ್ನಬಸಪ್ಪ, ನಗರದ ಶುಚಿತ್ವ ಕಾಪಾಡುವ ಉದ್ದೇಶದಿಂದ ಸುಸಜ್ಜಿತ ಫುಡ್ಕೋರ್ಟ್ಗಳ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ಎಸ್.ರಮೇಶ್ ಮಾತನಾಡಿ, ಗಾಂಧಿ ಬಜಾರ್ನ ತರಕಾರಿ ಮಾರುಕಟ್ಟೆ ಸ್ಥಳಾಂತರಿಸುವ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.