ಶಿವಮೊಗ್ಗ

ಆಯುಧವಾಗಿ ಧರ್ಮ ಬಳಕೆ ಅಪಾಯಕಾರಿ

ಸಾಗರ: ಒಂದು ಕಾಲದಲ್ಲಿ ಜಗತ್ತಿನ ಎಲ್ಲ ಧರ್ಮಗಳು ಪ್ರಗತಿಪರ ಆಲೋಚನೆಯನ್ನೆ ಹೊಂದಿತ್ತು. ಕಾಲ ಬದಲಾದಂತೆ ಧರ್ಮದ ಅರ್ಥ ಬದಲಾಗುತ್ತಿದೆ. ಈಗ ಧರ್ಮವನ್ನು ಆಯುಧವಾಗಿ ಉಪಯೋಗಿಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹಂಪಿ ಕನ್ನಡ ವಿವಿ ವಿದ್ವಾಂಸ ಡಾ. ರಹಮತ್ ತರೀಕೆರೆ ಹೇಳಿದರು.
 ಇಲ್ಲಿನ ಒಡನಾಟ ಸಂಸ್ಥೆ ಗೀತಾಂಜಲಿ ಪುಸ್ತಕ ಪ್ರಕಾಶನದ ಸಹಯೋಗದೊಂದಿಗೆ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ನಾ. ಡಿಸೋಜ ಸಾಹಿತ್ಯ ಅಧ್ಯಯನದ ಮಲೆನಾಡಿಗ ಹಾಗೂ ಡಿಸೋಜರ 15 ಮಕ್ಕಳ ಮಿನಿ ಕಾದಂಬರಿ ಸಮಗ್ರ ಕೃತಿ ಹಾರುವ ಹಕ್ಕಿಗೆ ಹಸಿರೆಲೆ ತೋರಣ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಧರ್ಮ, ಪ್ರಭುತ್ವ, ಉದ್ದಿಮೆ, ಲೇಖಕ, ಮಾಧ್ಯಮ, ನ್ಯಾಯಾಂಗ, ಶಿಕ್ಷಕ ಸೇರಿದಂತೆ ಸಮಾಜಕ್ಕೆ ಮಾರ್ಗದರ್ಶಿಯಾಗಬೇಕಾಗಿದ್ದ ಬಹುತೇಕ ಕ್ಷೇತ್ರಗಳು ನಮ್ಮನ್ನು ದಿಕ್ಕುತಪ್ಪಿಸುತ್ತಿರುವ ಹೊತ್ತಿನಲ್ಲಿ ನಾ. ಡಿಸೋಜ ಅವರ ಮುಳುಗಡೆ ಕೇಂದ್ರಿತ ಬರಹಗಳನ್ನು ಯಾವ ರೀತಿ ಅರ್ಥೈಸಿಕೊಳ್ಳಬೇಕು ಎನ್ನುವ ಜಿಜ್ಞಾಸೆ ಕಾಡುತ್ತದೆ.
   ಡಿಸೋಜ ಮಲೆನಾಡಿನ ಮೂಲೆಯಲ್ಲಿದ್ದುಕೊಂಡು ಮುಳುಗಡೆ ಬದುಕಿನ ಸಂಕಷ್ಟಗಳನ್ನು ಚಿತ್ರಿಸಿ ಮೌನವಾಗಿ ಸಾಹಿತ್ಯದ ಮೂಲಕ ಈ ಎಲ್ಲವನ್ನು ಪ್ರತಿನಿಧಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
 ಬರಹದ ಮೂಲಕ ವ್ಯವಸ್ಥೆಯ ದೋಷವನ್ನು ತಿದ್ದುವ ಲೇಖಕರ ಸಂಖ್ಯೆ ಕಡಿಮೆಯಾಗಿದೆ. ನಮಗೆ ಅಭಿವೃದ್ಧಿಯ ಪರಿಕಲ್ಪನೆಯೇ ಶಾಪವಾಗಿ ಪರಿಣಮಿಸುತ್ತಿದೆ.
    ನಮಗೆ ಕತ್ತಲಾದರೂ ಚಿಂತೆಯಿಲ್ಲ ಬೇರೆಯವರ ಬದುಕು ಬೆಳಕಾಗಬೇಕು ಎನ್ನುವ ಮನೋಭಾವಕ್ಕಿಂತ ಯಾರ ಶವದ ಮೇಲೆ ಗೋಡೆ ಕಟ್ಟುತ್ತಿದ್ದಾರೆ ಎನ್ನುವ ಪರಿಕಲ್ಪನೆ ನಮ್ಮನ್ನಾಳುವವರಿಗೆ ಇಲ್ಲವಾಗಿದೆ. ಡಿಸೋಜರ ಬಹುತೇಕ ಬರಹಗಳು ವ್ಯವಸ್ಥೆಯನ್ನು ಪ್ರಶ್ನಿಸುವ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
 ಪುಸ್ತಕ ಕುರಿತು ಮಕ್ಕಳ ಸಾಹಿತಿ ಆನಂದ ಪಾಟೀಲ್, ನಮ್ಮಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಹಿಂದಿನಿಂದಲೂ ತಾತ್ಸಾರ ಮನೋಭಾವಿದೆ. ಆದರೆ ನಾ. ಡಿಸೋಜ ಮಕ್ಕಳ ಸಾಹಿತ್ಯದ ಮೂಲಕ ಮಕ್ಕಳು ಮಾತನಾಡುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
  ಮಲೆನಾಡಿನ ಬಡ, ಮಧ್ಯಮ, ಕೆಳವರ್ಗದ ಮಕ್ಕಳ ಭವಿಷ್ಯ ಕುರಿತು ಚಿತ್ರಣ ನೀಡಿದ್ದಾರೆ. ನಾಡಿ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಹೇಳಿದರು.
    ಡಿಸೋಜ ಅವರಿಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಪ್ರಾಚಾರ್ಯ ಡಾ. ಗುರುರಾವ್ ಬಾಪಟ್, ಶಂಕರಮಠದ ಧರ್ಮದರ್ಶಿ ಎಸ್.ಆರ್.ತಿಮ್ಮಪ್ಪ, ವಿಲಿಯಂ, ಮಾರ್ಷಲ್ ಶಿರಾಂ, ಎಂ.ಪಿ. ಲಕ್ಷ್ಮೀನಾರಾಯಣ ಮೊದಲಾದವರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ  ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!