ಶಿವಮೊಗ್ಗ: ಅನಗತ್ಯ ರಸ್ತೆ ಕಾಮಗಾರಿಯನ್ನು ವಿರೋಧಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ಎಪಿಎಂಸಿ ಯಾರ್ಡ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಯಾರ್ಡ್ನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಾಲಿ 2-3 ಇಂಚಿನ ರಸ್ತೆ ಸುಸ್ಥಿಯಲ್ಲಿದ್ದರೂ ಪುನಃ ರಸ್ತೆ ಕಾಮಗಾರಿ ನಡೆಯುತ್ತಿರುವುದನ್ನು ಗಮನಿಸಿದ ಅಣ್ಣ ಹಜಾರೆ ಹೋರಾಟ ಸಮಿತಿ ಸದಸ್ಯರು ಕಾಮಗಾರಿಯನ್ನು ನಿಲ್ಲಿಸುವಂತೆ ತಡೆಯೊಡಿದ್ದರು. ಇಲ್ಲಿ ವಾಹನ ದಟ್ಟಣೆ ಕಡಿಮೆ ಇರುವುದರಿಂದ ದಪ್ಪದ ರಸ್ತೆ ನಿರ್ಮಾಣದ ಅವಶ್ಯಕತೆ ಇರುವುದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಲ್ಲಿ ರಸ್ತೆ ಹಾಳಾಗಿದೆಯೋ ಅದನ್ನು ರಿಪೇರಿ ಮಾಡುವುದನ್ನು ಬಿಟ್ಟು ಚನ್ನಾಗಿರುವ ರಸ್ತೆಗಳಲ್ಲಿ ಕಾಮಗಾರಿ ನಡೆಸಿದರೆ ಸಮಯ ಮತ್ತು ಕೋಟ್ಯಾಂತರ ರುಪಾಯಿ ಹಣ ವ್ಯಯವಾಗುತ್ತದೆ. ಆದ್ದರಿಂದ ಕೂಡಲೇ ಕಾಮಗಾರಿಯನ್ನು ನಿಲ್ಲಿಸಬೇಕು.
ಈ ಕಾಮಗಾರಿ ಕುರಿತಂತೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅವಶ್ಯವಿರುವಷ್ಟು ಕಾಮಗಾರಿ ನಡೆಸಬೇಕು. ಜಿಲ್ಲಾಧಿಕಾರಿಗಳು ಮತ್ತು ಉಪಮುಖ್ಯಮಂತ್ರಿಗಳು ಕಾಳಜಿ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪಛ್ರತಿಭಟನೆಯಲ್ಲಿ ಕೆ. ವಸಂತಕುಮಾರ್, ಪರಿಸರ ರಮೇಶ್, ಸತೀಶ್ಕುಮಾರ್, ಅಶೋಕ್ಯಾದವ್, ಅಶೋಕ್ ಕುಮಾರ್, ಜನಮೇಜಿರಾವ್, ಆನಂದ್, ರಿಚರ್ಡ್ ಇದ್ದರು.