ಶಿವಮೊಗ್ಗ

ಸರ್ಕಾರ ಬರ, ನೆರೆ ಸಮೀಕ್ಷೆ ನಿರ್ಲಕ್ಷ್ಯ

ಶಿವಮೊಗ್ಗ:  ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾಗೂ ಬರ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಇದುವರೆಗೂ ಕೈಗೊಂಡಿಲ್ಲ. ಜಿಲ್ಲಾ ಮಂತ್ರಿಗಳು ತಮ್ಮ ಜಿಲ್ಲೆಗಳ ಪ್ರವಾಸ ಮಾಡಿಲ್ಲ. ಯಾವ ಇಲಾಖೆಗಳ ಅಕಾರಿಗಳು ಕೂಡ ಈ ಸಂಬಂಧ ಸಮೀಕ್ಷೆ ನಡೆಸಿಲ್ಲ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಜಿಲ್ಲೆಗಳಲ್ಲಿ ಮಳೆಯೇ ಬಾರದೆ ಬರ ತಲೆದೋರಿದೆ. ಇನ್ನುಳಿದ ಕೆಲ ಜಿಲ್ಲೆಗಳಲ್ಲಿ ಮಳೆ ಅಕವಾಗಿ ನೆರೆ ಸಂಭವಿಸಿ ಸಾರ್ವಜನಿಕ ಆಸ್ತಿಪಾಸ್ತಿ, ರೈತರ ಜಮೀನಿಗೆ ಹಾನಿಯಾಗಿದೆ. ಈ ಬಗ್ಗೆ ನಿಖರ ಸಮೀಕ್ಷೆ ಇನ್ನೂ ನಡೆಸಿಲ್ಲ. ಎಲ್ಲದಕ್ಕೂ ಕೇಂದ್ರದ ಮೇಲೆ ಹಾಕಿ ರಾಜ್ಯ ಸರ್ಕಾರ ಕುಳಿತುಕೊಂಡಿದೆ ಎಂದು ಆರೋಪಿಸಿದರು.
ಅಕ್ರಮ ತಡೆವಲ್ಲಿ ವಿಫಲ:  ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿ, ಮರಳು ವ್ಯವಹಾರ, ಬಿಪಿಎಲ್ ಕಾರ್ಡ್ ವಿತರಣೆ, ಅತ್ಯಾಚಾರ ಪ್ರಕರಣಗಳ ತಡೆಯುವಲ್ಲಿ ವಿಫಲ ಹೀಗೆ ಹಲವಾರು ವಿಷಯಗಳಲ್ಲಿ ಪ್ರಗತಿ ಸಾಧಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವುದು ಅನೇಕ ಕಡೆಗಳಲ್ಲಿ ಪತ್ತೆಯಾಗಿದೆ. ನಿಜವಾದ ಫಲಾನುಭವಿಗಳಿಗೆ ಅನ್ನಭಾಗ್ಯ ಅಕ್ಕಿ ಸಿಗುತ್ತಿಲ್ಲ. ಇದನ್ನು ತಡೆಯುವಲ್ಲಿ  ಸರ್ಕಾರ ವಿಫಲವಾಗಿದೆ ಎಂದರು.
ರಾಜ್ಯದಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಕಾಳಸಂತೆಗೆ ಸರ್ಕಾರವೇ ಜಿಲ್ಲಾಕಾರಿಗಳನ್ನು ಬಳಸಿಕೊಳ್ಳುತ್ತಿರುವ ಅನುಮಾನವಿದೆ. ಈ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ನಡೆಸಿದರೂ ಫಲಪ್ರದವಾಗುವ ನಂಬಿಕೆ ಇಲ್ಲವೆಂದರು.
ಕೃಷ್ಣ ಕಾಲದಿಂದ ತನಿಖೆಯಾಗಲಿ: ಡಿನೋಟಿಫಿಕೇಶನ್ ಸಂಬಂಧ ಕೇವಲ ಜಗದೀಶ್ ಶೆಟ್ಟರ್ ಮೇಲೆ ಮಾತ್ರ ಎಫ್‌ಐಆರ್ ಮಾಡಿ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಸರ್ಕಾರಕ್ಕೆ ತಾಕತ್ತಿದ್ದರೆ ಅದಕ್ಕಿಂತ ಹಿಂದೆ ಹೋಗಿ ತನಿಖೆ ಮಾಡಲಿ ಎಂದು ಸವಾಲೆಸೆದರು.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗಿನಿಂದ ಇದುವರೆಗೆ ಆಗಿರುವ ಡಿನೋಟಿಫಿಕೇಶನ್ ಹಾಗೂ ವಿದ್ಯುತ್ ಇಲಾಖೆಯಲ್ಲಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಲಿ. ಅದು ಬಿಟ್ಟು ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗಿನಿಂದ ತನಿಖೆ ನಡೆಸುತ್ತೇವೆ ಎಂಬುದು ಸರಿಯಲ್ಲ ಎಂದರು.

ಪ್ರತ್ಯೇಕ ಸಲಹೆಗಾರ ಏಕೆ?
ರಾಜ್ಯದ ಗೃಹ ಮಂತ್ರಿ ದುರ್ಬಲರು ಎಂದು ಗೊತ್ತಾದ ಬಳಿಕ ಆ ಇಲಾಖೆಗೆ ಕೆಂಪಯ್ಯ ಅವರನ್ನು ಪರೋಕ್ಷವಾಗಿ ಮಂತ್ರಿಯನ್ನಾಗಿ ಮಾಡಲಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಆದೇಶದಲ್ಲಿ ನೆಪ ಮಾತ್ರಕ್ಕೆ ಸಲಹೆಗಾರ ಎಂದು ಉಲ್ಲೇಖಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸೋನಿಯಾ ಗಾಂಧಿ ಅವರು ಗೃಹ ಮಂತ್ರಿಯ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ, ದುರ್ಬಲ ಗೃಹ ಮಂತ್ರಿಯನ್ನು ತೆಗೆದುಹಾಕಲು ಸಿಎಂಗೆ ಆಗುತ್ತಿಲ್ಲ. ಹಾಗಾಗಿ ಸಲಹೆಗಾರರ ನೆಪದಲ್ಲಿ ಕೆಂಪಯ್ಯರನ್ನು ನೇಮಿಸಲಾಗಿದೆ ಎಂದರು. ಗೃಹ ಇಲಾಖೆಗೆ ಪ್ರತ್ಯೇಕ ಸಲಹೆಗಾರರನ್ನು ಯಾವ ರಾಜ್ಯದಲ್ಲಿಯೂ ನೇಮಕ ಮಾಡಿಲ್ಲ. ಇದು ರಾಜ್ಯದಲ್ಲಿ ಮೊದಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT