ಶಿವಮೊಗ್ಗ

ಕತ್ತಲ ಸ್ಥಿತಿಯಿಂದ ಮಹಿಳೆ ಹೊರಬರಲಿ

ಶಿವಮೊಗ್ಗ: ವೇದ ಕಾಲದಿಂದಲೂ ಸ್ತ್ರೀ ಸಾಹಿತ್ಯ ಬೆಳೆದು ಬಂದಿದೆ. ಆನಂತರದ ಕಾಲಘಟ್ಟದಲ್ಲಿ ಹಿನ್ನಡೆಯಾಗಿತ್ತು. ಆದರೆ ಈಗ ಮಹಿಳೆ ತನ್ನೆಲ್ಲಾ ಸ್ಥಿತಿಗಳಿಂದ ಹೊರಬಂದು ಸಾಹಿತ್ಯ ಬೆಳಗಿಸುತ್ತಿದ್ದಾಳೆ. ಆದರೂ ಪ್ರಸ್ತುತ ಕತ್ತಲ ಸ್ಥಿತಿಯಲ್ಲಿದ್ದಾಳೆ. ಅದರಿಂದ ಹೊರಬರಬೇಕು ಎಂದು ಅಮೂಲ್ಯ ಶೋಧ ವಸ್ತು ಸಂಗ್ರಹಾಲಯದ ಸಂಸ್ಥಾಪಕ ಎಚ್.ಕೆ. ಖಂಡೋಬರಾವ್ ಹೇಳಿದರು.
ತಾಲೂಕಿನ ಲಕ್ಕಿನಕೊಪ್ಪ ಬಳಿಯ ಅಮೂಲ್ಯ ಶೋಧದ ನೆನಪು ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಜಿಲ್ಲಾ ಸಂಘದ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಚರ್ಚೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶಾಲ ಮನೋಭಾವನೆ ಬೆಳೆಸಿಕೊಂಡು ಕುಟುಂಬ ಬೆಳಗುವುದರ ಜತೆಗೆ ಸಂಸ್ಕೃತಿ, ಭಾರತೀಯತೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ಎಸ್.ವಿ. ಚಂದ್ರಕಲಾ ಮಾತನಾಡಿದರು.
ಚರ್ಚಾಕೂಟದಲ್ಲಿ ಅತ್ಯುತ್ತಮವಾಗಿ ಮಾತನಾಡಿದ ತಾರಾಪ್ರಸಾದ್, ಆಶಾ, ಚಂದ್ರಿಕಾರವರಿಗೆ ಬಹುಮಾನ ನೀಡಲಾಯಿತು. ಕವಿಗೋಷ್ಠಿಯಲ್ಲಿ ಸುನೀತಾ, ಜಯಲಕ್ಷ್ಮಿ, ಮಾನಸ, ವೀಣಾ, ಎನ್. ಸುಮ, ನಾಗರತ್ನ, ಶಾರದ, ಶಾರದ ಉಳವಿ, ಗೀತಾ ಸೇರಿದಂತೆ ಹಲವರು ಭಾಗವಹಿಸಿದ್ದರು. ಲೇಖಕಿ ಊರ್ಮಿಳಾ ರಾವ್, ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕಿ ಸು. ವಿಜಯಲಕ್ಷ್ಮಿ ಮತ್ತಿತರರು ಇದ್ದರು. ವಿಜಯಾ ಪ್ರಾರ್ಥಿಸಿದರು. ಶಾಲಿನಿ ನಿರೂಪಿಸಿದರು. ಪ್ರೊ. ಕಿರಣ್ ಸ್ವಾಗತಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ