ಶಿವಮೊಗ್ಗ

ನಿವೇಶನ ಸೌಲಭ್ಯ ಕಲ್ಪಿಸಲು ಆಗ್ರಹ

ಭರಮಸಾಗರ:  ಇಲ್ಲಿಗೆ ಸಮೀಪದ ಕೋಗುಂಡೆ ಗ್ರಾ.ಪಂ.ಯಲ್ಲಿ ಆಶ್ರಯ ಗ್ರಾಮೀಣ ನಿವೇಶನ ಯೋಜನೆ ಫಲಾನುಭವಿಗಳ ಆಯ್ಕೆ ಬಗ್ಗೆ ಗುರುವಾರ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ ನೇತೃತ್ವದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗ್ರಾಮಸಭೆ ನಡೆಯಿತು.
25 ವರ್ಷಗಳಿಂದ ನಿವೇಶನ ಹಂಚಿಕೆಯಾಗಿಲ್ಲ. ಈ ಬಗ್ಗೆ ಜನಪರ ಸಂಘಟನೆಗಳು, ಕನ್ನಡ ಸಮರ ಸೇನೆ ಕಾರ್ಯಕರ್ತರು ಹಲವಾರು ಬಾರಿ ಸೌಲಭ್ಯಕ್ಕಾಗಿ ಪ್ರತಿಭಟನೆ ನಡೆಸಿ, ಆಗ್ರಹಿಸಿದ್ದಾರೆ. ಜಿಲ್ಲಾಡಳಿತಕ್ಕೂ ಮನವಿ ನೀಡಲಾಗಿದೆ. ಕಾರಣ, ಈ ಬಾರಿ ನಿವೇಶನ ಆಯ್ಕೆಯಲ್ಲಿ ಯಾವುದೇ ತಾರತಮ್ಯ ಆಗಬಾರದು. ಫಲಾನುಭವಿಗಳಿಗೆ ವಂಚಿತವಾಗದ ರೀತಿ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಅರ್ಹತೆಗೆ ಆದ್ಯತೆ ನೀಡಬೇಕು ಎಂದು ಸಭೆಗೆ ಸಾರ್ವಜನಿಕರು ಮನವರಿಕೆ ಮಾಡಿದರು.
ಕೋಗುಂಡೆ ಗ್ರಾಮದ ಮುಖ್ಯ ರಸ್ತೆ ಸಮೀಪ ಹೊಸ ಸೈಟ್ ಬಡಾವಣೆಯಲ್ಲಿ 4 ಎಕರೆ, 16 ಗುಂಟೆ ವಿಸ್ತೀರ್ಣ ಜಾಗದಲ್ಲಿ 30್ಢ40 ಅಳತೆಯ 79 ನಿವೇಶನಗಳನ್ನು ಗುರುತಿಸಲಾಗಿದೆ.  ಈ ಹಿಂದೆ ಆರಂಭದಲ್ಲಿ 21 ನಿವೇಶನಗಳನ್ನು ಹಂಚಲಾಗಿತ್ತು.  ಈಗ 58 ನಿವೇಶನಗಳ ಹಂಚಿಕೆ ಬಗ್ಗೆ ಗ್ರಾಮಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಇನ್ನು ಉಳಿಕೆ ಜಾಗದಲ್ಲಿ ಅಂಗನವಾಡಿ, ಕುಡಿಯುವ ನೀರು ಶುದ್ಧೀಕರಣ ಘಟಕ, ಪಂಚಾಯ್ತಿ ಕಾರ್ಯಾಲಯಕ್ಕೆ ಜಾಗವನ್ನು ಮೀಸಲಿರಿಸಿರುವುದಾಗಿ ಗ್ರಾ.ಪಂ. ಅಧ್ಯಕ್ಷೆ ತಿಳಿಸಿದರು.
ಇದರಲ್ಲಿ ಅಂಗವಿಕಲರು ಉಮಾ, ರೇಣುಕಮ್ಮ, ನೀಲಮ್ಮ, ದೇವೀರಮ್ಮ, ಕರಿಬಸಮ್ಮ, ಬಸವರಾಜಪ್ಪ, ಕಲ್ಪನಾ, ಹಾಗೂ ವಿಧವಾ ಫಲಾನುಭವಿಗಳು ಮಂಜಮ್ಮ, ಶಶಿಕಲಾ, ಜೆ.ಸಿ.ಭಾರತಮ್ಮ, ತುಳಸಮ್ಮ, ನೀಲಮ್ಮ, ಅವರ ಹೆಸರನ್ನು ಬಹಿರಂಗಪಡಿಸಲಾಯಿತು. ನಿವೇಶನಕ್ಕೆ ಆಯ್ಕೆಯಾಗಿರುವ ಸಂಪೂರ್ಣ 58 ಫಲಾನುಭವಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಗ್ರಾಮದಲ್ಲಿ ನಾಗವೇಣಿ ಎಂಬ ಯುವತಿ ಅತ್ಯಾಚಾರಕ್ಕೊಳಗಾಗಿ ಮಗುವನ್ನು ಹೊಂದಿ ತನ್ನ ತಂದೆ ಮನೆಯಲ್ಲಿ ವಾಸವಾಗಿದ್ದಾರೆ. ಅವರೀಗ ಯಾವುದೇ ಆದಾಯ, ಉದ್ಯೋಗವೂ ಇಲ್ಲದೆ ಮಗುವಿನೊಂದಿಗೆ ಇರುತ್ತಾರೆ. ಆ ಯುವತಿಗೆ 1 ನಿವೇಶನದ ಅವಶ್ಯಕತೆ ಇದೆ. ಈ ಬಗ್ಗೆ ಗ್ರಾ.ಪಂ.ಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಗ್ರಾ.ಪಂ. ಆಡಳಿತ ಮಂಡಳಿ ಈ ಯುವತಿಗೆ ಅನುಕಂಪ, ಮಾನವೀಯತೆಯ ಮೇಲೆ 1 ನಿವೇಶನವನ್ನು ಹಂಚಿಕೆ ಮಾಡಬೇಕೆಂದು ಯುವತಿ ಸಂಬಂಧಿಗಳು ಮತ್ತು ಹಿತೈಶಿಗಳು ಆಗ್ರಹಿಸಿದರು. ಆಕೆಯ ನೆರವಿಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದರು. ಈ ಬಗ್ಗೆ ಪಿಡಿಒ ಗ್ರಾ.ಪಂ. ಅಧ್ಯಕ್ಷರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಚಿತ್ರಮ್ಮ, ಮಾಜಿ ಅಧ್ಯಕ್ಷೆ ಉಷಾ, ಈಶ್ವರಪ್ಪ, ಲೆಕ್ಕ ಸಹಾಯಕ ಚೌಡಪ್ಪ, ತಾಪಂ ಮಾಜಿ ಸದಸ್ಯೆ ಮೋಹನ್‌ದಾಸ್, ಮಾಜಿ ಎಪಿಎಂಸಿ ಅಧ್ಯಕ್ಷ ಮಂಜಣ್ಣ, ಪಿಡಿಒ ಜಿ.ಆರ್. ಅಂಬಿಕಾ, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್