ಆಯನೂರು: ಶಾಲಾ ಕಾಲೇಜು ಆವರಣದಲ್ಲಿ ಪುಂಡಪೋಕರಿಗಳ ಹಾವಳಿ ನಿಯಂತ್ರಿಸಬೇಕು, ಅತೀ ವೇಗವಾಗಿ ಚಲಿಸುವ ಮತ್ತು ಕರ್ಕಶ ಹಾರನ್ ಮಾಡುವ ಬಸ್ಗಳ ಮೇಲೆ ಕ್ರಮಕೈಗೊಳ್ಳಬೇಕು ಹಾಗೂ ಗ್ರಾಮದಲ್ಲಿ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ಬಿಜೆಪಿ ಆಯನೂರು ಘಟಕ ಪ್ರತಿಭಟನೆ ನಡೆಸಿತು.
ಪ್ರಸ್ತುತ ದಿನಗಳಲ್ಲಿ ಆಯನೂರು ಅಭಿವೃದ್ಧಿ ಸಾಧಿಸುತ್ತಿದ್ದು ಪ್ರಮುಖ ಹೋಬಳಿ ಕೇಂದ್ರವಾಗಿದೆ. ಸುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಅಲ್ಲದೆ ಪಥಮ ದರ್ಜೆ ಕಾಲೇಜು ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಜನದಟ್ಟಣೆ ಅಧಿಕವಾಗಿದ್ದು ಜನರ ಓಡಾಡಕ್ಕೆ ವೇಗವಾಗಿ ಸಂಚರಿಸುವ ಬಸ್ಸುಗಳಿಂದ ಅನಾಹುತದ ಪ್ರಕರಣಗಳು ಹೆಚ್ಚುತ್ತಿವೆ. ಬಸ್ಸುಗಳ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿತು.
ಬಿಜೆಪಿ ಗ್ರಾಮಾಂತರ ಘಟಕ ಪ್ರಧಾನ ಕಾರ್ಯದರ್ಶಿ ಕುಪೇಂದ್ರ, ಆಯನೂರು ಘಟಕ ಅಧ್ಯಕ್ಷ ಹರೀಶ್, ಪಕ್ಷದ ಪ್ರಮುಖರಾದ ಶಿವಶಂಕರ ನಾಯರ್, ಜಯರಾಂ ನಾಯ್ಕ, ಉದಯಕುಮಾರ್, ಮಂಜುನಾಥ ಶೆಟ್ಟಿ, ಪ್ರಸನ್ನ, ಕೇಶವನ್ ನಾಯರ್, ಪದ್ಮಿನಿ, ಭಾಗ್ಯ ನರಸಿಂಹ, ಚಂದ್ರಕಲಾ ಬಾಯಿ, ಚಂದುಶೆಟ್ಟಿ, ಮಹೇಶ್ವರಪ್ಪ ಇನ್ನಿತರರು ಹಾಜರಿದ್ದರು. ಕುಂಸಿ ಸಬ್ ಇನ್ಸ್ಪೆಕ್ಟರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಕಾಲೇಜು ಹಳೇ ವಿದ್ಯಾರ್ಥಿಗಳ ಸಭೆ 21ಕ್ಕೆ
ಹೊಳೆಹೊನ್ನೂರು: ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಭೆ ಕಾಲೇಜು ಆವರಣದಲ್ಲಿ ಜು.21ರಂದು ಬೆಳಗ್ಗೆ 11ಕ್ಕೆ ಕರೆಯಲಾಗಿದೆ. ಸಭೆಯಲ್ಲಿ ಸಂಘ ಸ್ಥಾಪನೆ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಕಾಲೇಜು ಅಭಿವೃದ್ಧಿ ವಿಷಯವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ನಾನಾ ಹುದ್ದೆಯಲ್ಲಿರುವ ಹಾಗೂ ವಿವಿಧೆಡೆ ನೆಲೆಸಿರುವ ಕಾಲೇಜಿನ ಹಳೆ ವಿದ್ಯಾರ್ಥಿಗಳು ಭಾಗವಹಿಸುವಂತೆ ಕೋರಲಾಗಿದೆ. ಮಾಹಿತಿಗೆ 7259602329 - ಎಚ್.ಕೆ. ಸುನೀಲ್, 9880015801 -ಎಸ್.ವಿ. ರಘುನಾಥ್, 7829147535 - ಶ್ರೀಕಾಂತ್ ಸಂಪರ್ಕಿಸಲು ತಿಳಿಸಿದೆ.