ಶಿವಮೊಗ್ಗ

ಅರ್ಜಿ ಸಲ್ಲಿಕೆಗೆ ಮೂರೇ ದಿನ ಬಾಕಿ

ಶಿವಮೊಗ್ಗ: ಈ ಸಾಲಿನ ಎಂಬಿಎ, ಎಂಸಿಎ, ಪಿಜಿಡಿಎಂ ಪ್ರವೇಶಕ್ಕೆ ನಾಲ್ಕು ಪ್ರವೇಶ ಪರೀಕ್ಷೆಗಳ ಪೈಕಿ ಒಂದನ್ನು ಬರೆಯುವುದು ಅನಿವಾರ್ಯ. ಇದೀಗ ಕೆ-ಮ್ಯಾಟ್ ಪರೀಕ್ಷೆ ಆಗಸ್ಟ್ 3ರಂದು ನಡೆಯಲಿದೆ. ಇದಕ್ಕಾಗಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಕೊನೆ ಹಂತದಲ್ಲಿದ್ದು, ಅರ್ಜಿ ಸಲ್ಲಿಸಲು ಜುಲೈ 26 ಕಡೆ ದಿನ.
ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಕರ್ನಾಟಕ ಖಾಸಗಿ ಸ್ನಾತಕೋತ್ತರ ಕಾಲೇಜುಗಳ ಸಂಘದ ಪ್ರತಿನಿಧಿ ಆನಂದ್, ನ್ಯಾಯಾಲಯದ ಆದೇಶದಂತೆ ಎಂಬಿಎ, ಪಿಜಿಡಿಎಂ ಹಾಗೂ ಎಂಸಿಎ ಪದವಿ ಪ್ರವೇಶಕ್ಕೆ ಒಂದಾದರೂ ಪ್ರವೇಶ ಪರೀಕ್ಷೆ ಎದುರಿಸಿ ರ್ಯಾಂಕ್ (ಉತ್ತೀರ್ಣ) ಪಡೆದುಕೊಳ್ಳುವುದು ಅನಿವಾರ್ಯ. ಮ್ಯಾನೇಜ್‌ಮೆಂಟ್ ಸೀಟುಗಳನ್ನು ಪಡೆದುಕೊಳ್ಳುವುದಕ್ಕೂ ಪ್ರವೇಶ ಪರೀಕ್ಷೆ ಎದುರಿಸುವುದು ಕಡ್ಡಾಯ ಎಂದು ತಿಳಿಸಿದರು.
ಶಿವಮೊಗ್ಗದ ಪೆಸೆಟ್ ಕಾಲೇಜು (ಪಿಇಎಸ್ ಐಟಿಎಂ) ಸೇರಿದಂತೆ ಕರ್ನಾಟಕದ 14 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ. ಮೈಸೂರು, ಬೆಂಗಳೂರು, ಮಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ ಹಾಗೂ ಕೋಲಾರದಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುತ್ತದೆ.
ಈ ಪರೀಕ್ಷೆಗೆ ಅರ್ಜಿಗಳನ್ನು ಢಿಢಿಢಿ.್ಞಟಛಡ್ಝಿಟಿಜ್ಝಛ.್ಛ್ಟಟ ನಿಂದ ಪಡೆಯಬಹುದು. ಪರೀಕ್ಷೆಗೆ ಅರ್ಜಿಗಳನ್ನು ಕೆ-ಮ್ಯಾಟ್ ಕಚೇರಿಗೆ ತಲುಪಿಸಲು ಜುಲೈ 26 ಕಡೆ ದಿನವಾಗಿರುತ್ತದೆ.
ರು. 700 ಡಿಡಿಯನ್ನು ಕೆಮ್ಯಾಟ್-2014 ಹೆಸರಿಗೆ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಪಡೆಯಬೇಕು. ಎಂಬಿಎ ಹಾಗೂ ಎಂಸಿಎ ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವವರು ರು. 1000 ಡಿಡಿ ಪಡೆಯಬೇಕು.
ಪೂರ್ಣಗೊಳಿಸಿದ ಅರ್ಜಿಗಳನ್ನು ಕಾರ್ಯದರ್ಶಿ, ಕರ್ನಾಟಕ ಖಾಸಗಿ ಸ್ನಾತಕೋತ್ತರ ಕಾಲೇಜುಗಳ ಸಂಘ, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಸಿಎ ಸೈಟ್‌ನಂ.26, ಯಲಹಂಕ ನ್ಯೂ ಟೈನ್, ಬೆಂಗಳೂರು-64 ಈ ವಿಳಾಸಕ್ಕೆ ತಲುಪಿಸಬೇಕು. ವಿವರಗಳಿಗೆ ಮೊ. 9343996656 ಅಥವಾ 9343996664ಗೆ ಸಂಪರ್ಕಿಸ ಬಹುದು ಎಂದು ಆನಂದ್ ವಿವರಿಸಿದರು.
ಪಿಇಎಸ್ ಐಟಿಎಂ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಮಾತನಾಡಿ, ಪಿಇಎಸ್ ಐಟಿಎಂನಲ್ಲೂ ಮ್ಯಾನೇಜ್‌ಮೆಂಟ್ ಸ್ನಾತಕೋತ್ತರ ಸೀಟುಗಳನ್ನು (ಮ್ಯಾನೇಜ್‌ಮೆಂಟ್ ಸೀಟು) ಸಾಮಾಜಿಕ ಕಳಕಳಿಯಿಂದ ಅತಿ ಕಡಿಮೆ ಶುಲ್ಕಪಡೆದು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಎಂದು ತಿಳಿಸಿದರು. ಜಂಟಿ ಕಾರ್ಯದರ್ಶಿ ಅರುಣಾದೇವಿ, ಪ್ರಾಂಶುಪಾಲ ಅಶೋಕ್‌ಕುಮಾರ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ