ಶಿವಮೊಗ್ಗ

ಮಠಗಳಲ್ಲಿ ಅಬಲರ ಉದ್ಧಾರಶಕ್ತಿ

ಬೆಕ್ಕಿನ ಕಲ್ಮಠದಲ್ಲಿ ಶ್ರಾವಣ ಚಿಂತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಎಸ್‌ವೈ


ಶಿವಮೊಗ್ಗ:  ಜೀವನವೆಂಬ ಸಾಗರದಲ್ಲಿ ಮನುಷ್ಯ ದಿಕ್ಕು ತಪ್ಪುವುದು ಸಹಜ. ಸರಿ ದಾರಿಯಲ್ಲಿ ಸಾಗಲು ಮಠಾಧೀಶರ ಮಾರ್ಗದರ್ಶನ ಅವಶ್ಯಕ ಎಂದು ಸಂಸದ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಬೆಕ್ಕಿನ ಕಲ್ಮಠದಲ್ಲಿ ಶ್ರಾವಣ ಚಿಂತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭೂಮಿಗೆ ಯಾವ ರೀತಿ ಗುರುತ್ವಾಕರ್ಷಣೆ ಶಕ್ತಿಯಿಂದ ವಸ್ತು ಸೆಳೆಯುವ ಶಕ್ತಿ ಇದೆಯೋ, ಅದೇ ರೀತಿ ಸಮಾಜದಲ್ಲಿ ಕೆಳಗೆ ಬಿದ್ದವರನ್ನು ಮೇಲಕ್ಕೆತ್ತುವ ಶಕ್ತಿ ಮಠಗಳಿಗೆ ಇದೆ ಎಂಬುದು ಅನುಭವಕ್ಕೆ ಬರುತ್ತಿವೆ ಎಂದರು.
ಬಸವಣ್ಣನವರು ಯುಗಪುರುಷರು, ಪುರುಷೋತ್ತಮರು. ಅವರ ಸ್ಮರಣೆ ಮಾತ್ರದಿಂದಲೇ ಪ್ರತಿ ರೋಮ ಜಾಗೃತಗೊಳ್ಳುವುದು ಅನುಭವಕ್ಕೆ ಬರುತ್ತಿದೆ. ಬಿಜ್ಜಳನ ಮಂತ್ರಿಯಾದರೂ ತಮ್ಮನ್ನು ಬಡವರೆಂದೇ ತೋರಿಸಿಕೊಳ್ಳುತ್ತಿದ್ದ ಸರಳ ಸಜ್ಜನಿಕೆ ವ್ಯಕ್ತಿ ಬಸವಣ್ಣ. ತುಂಬಿದ ಕೊಡ ತುಳುಕುವುದಿಲ್ಲ ಎಂಬುದಕ್ಕೆ ಸಾತ್ವಿಕ ಉದಾಹರಣೆ ಬಸವೇಶ್ವರರು ಎಂದು ಬಣ್ಣಿಸಿದರು.
ಒಂದು ಸಾವಿರಕ್ಕೂ ಹೆಚ್ಚು ಶಿವಾನುಭವ ಗೋಷ್ಠಿ ನಡೆಸಿದ ದಾಖಲೆ ಬೆಕ್ಕಿನ ಕಲ್ಮಠ ಶ್ರೀಗಳದ್ದು. ಇದೀಗ ಶಿವಮೊಗ್ಗ ನಗರಾದ್ಯಂತ 1 ತಿಂಗಳ ಕಾಲ ಶರಣರ ಚಿಂತನ ಮೌಲ್ಯವನ್ನು ಶ್ರಾವಣ ಚಿಂತನೆ ಕಾರ್ಯಕ್ರಮದ ಮೂಲಕ ಮನೆ ಮನೆ ಮುಟ್ಟಿಸುವ ಕಾರ್ಯ ಸಂತೋಷ ತರುವ ಸಂಗತಿ ಎಂದು ಹೇಳಿದರು.
ಉಪನ್ಯಾಸ ನೀಡಿದ ಬಿದರಹಳ್ಳಿ ನರಸಿಂಹ ಮೂರ್ತಿ, ಶಿರಾಳಕೊಪ್ಪ, ಉಡುತಡಿ, ತಾಳಗುಂದ ಸೇರಿದಂತೆ ಆ ಭಾಗದಲ್ಲಿ ಅದೆಷ್ಟೋ ಶಿವಶರಣರು, ವಚನಕಾರರು ನಡೆದಾಡಿದ ಸ್ಥಳ, ಅದೊಂದು ವಿಶ್ವವಿದ್ಯಾಲಯವಿದ್ದ ಸ್ಥಳ. ಆ ಅನುಭಾವಿಕ ವಲಯವಾಗಿ ಅಭಿವೃದ್ಧಿಪಡಿಸಬೇಕು ಎಂದು ಬಿಎಸ್‌ವೈ ಅವರನ್ನು ಕೋರಿದರು.
ಅಲ್ಲಮ ಪ್ರಭು ಕುರಿತು ಮಾತನಾಡಿದ ಅವರು, ಕ್ರಿಸ್ತಪೂರ್ವದಲ್ಲಿದ್ದ ಬುದ್ಧ ಹಾಗೂ ಸಾಕ್ರಟೀಸ್ ಮತ್ತು ಕ್ರಿಸ್ತಶಕದಲ್ಲಿ ಬರುವ ಐನ್‌ಸ್ಟೀನ್ ಹಾಗೂ ರಾಮಕೃಷ್ಣ ಪರಮಹಂಸರೊಂದಿಗೆ ಮಾತ್ರ ಅಲ್ಲಪ್ರಭುವನ್ನು ಹೋಲಿಸಲು ಸಾಧ್ಯ. ಐನ್‌ಸ್ಟೀನ್ ವೈರುಧ್ಯಗಳನ್ನು ಸೇರಿಸಿ ಮಾತನಾಡುತ್ತಿದ್ದ. ಧರ್ಮವಿಲ್ಲದ ವಿಜ್ಞಾನ ಕುರುಡು, ಧರ್ಮವಿಲ್ಲದ ವಿಜ್ಞಾನ ಕುಂಟು. ಇವೆರಡೂ ಒಂದೇ ನಾಣ್ಯದ ಮುಖಗಳು ಎಂದು ಐನ್‌ಸ್ಟೀನ್ ಹೇಳಿದ್ದ. ಅದೇ ರೀತಿ ಬೆಳಕಿನೊಳಗೆ ಕತ್ತಲೆ ಇದೆ, ಕತ್ತಲೊಳಗೆ ಬೆಳಕಿದೆ ಎಂದು ಅಲ್ಲಮಪ್ರಭು ಹೇಳಿದ್ದ ಎಂದು ವರ್ಣಿಸಿದರು.
ಪಂಪ ಆದಿ ಕವಿ ಇರಬಹುದು, ಅಲ್ಲಮ್ಮ ಅನಾದಿ ಕವಿ. ಪಂಪ, ರನ್ನ, ಜನ್ನ ಮತ್ತಿತರರು ಕಾಲದ ಹೊಳೆಯಲ್ಲಿ ಬರುವವರು. ಕಾಲವನ್ನೂ ಮೀರಿದವರು, ಕಾಲವನ್ನೇ ಮುರಿಯುವವರು, ಕಾಲವನ್ನೇ ಕೊಲ್ಲುವವರು ಅಲ್ಲಮಪ್ರಭು. ಅಲ್ಲಮಪ್ರಭು ನಿಜವಾದ ಅದ್ವೈತಿ, ಕನ್ನಡವನ್ನು ಅಲ್ಲಮ ಪ್ರಭು ಬಳಸಿರುವ ಹಾಗೆ ಇಷ್ಟು ಶತಮಾನಗಳ ವರೆಗೆ ಬೇರೆ ಯಾರಿಗೂ ಬಳಸಲು ಸಾಧ್ಯವಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕತ್ತಿಗೆ ಚನ್ನಪ್ಪ, ಎಚ್.ವಿ. ಮಹೇಶ್ವರಪ್ಪ, ಜ್ಯೋತಿಪ್ರಕಾಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್