ಶಿವಮೊಗ್ಗ

ಉಚಿತ ಊಟದ ಯೋಜನೆಗೆ ಚಾಲನೆ

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಮಿತಿ ತನ್ನ ವ್ಯಾಪ್ತಿಯ ಶಾಲಾ ಕಾಲೇಜುಗಳ ಅರ್ಹ ವಿದ್ಯಾರ್ಥಿಗಳಿಗೆ ಜಾರಿಗೊಳಿಸಿರುವ ಅನ್ನಪೂರ್ಣ ಉಚಿತ ಊಟದ ಯೋಜನೆಯು ಕಮಲಾ ನೆಹರೂ ಮಹಿಳಾ ಕಾಲೇಜಿನಲ್ಲಿ ಚಾಲನೆಗೊಂಡಿದೆ.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ, ತಮ್ಮ ಕಾಲೇಜಿನಲ್ಲಿ ದೂರದ ಹಳ್ಳಿಗಳ ಅನೇಕ ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಂಡಿದ್ದಾರೆ. ಅನೇಕರಿಗೆ ಮಧ್ಯಾಹ್ನ ಹೊಟೇಲ್‌ನಲ್ಲಿ ಊಟ ಮಾಡುವ ಶಕ್ತಿ ಇರುವುದಿಲ್ಲ. ನಗರದಲ್ಲೇ ಮನೆ ಇದ್ದರೂ ಮನೆಯಿಂದ ಊಟ ತರುವಷ್ಟು ಹಣಕಾಸಿನ ಅನುಕೂಲ ಅವರಿಗಿರುವುದಿಲ್ಲ. ಅಂತಹವರ ಸಹಾಯಕ್ಕೆ ಕಾಲೇಜು ಈ ಯೋಜನೆ ಹಮ್ಮಿಕೊಂಡಿದೆ ಎಂದರು.
 ತಮ್ಮ ಕಾಲೇಜಿನಲ್ಲಿ 75-80 ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು. ಅನ್ನಪೂರ್ಣ ಯೋಜನೆ ಸಮಿತಿಯ ಪ್ರೊ. ಹುಚ್ಚಯ್ಯ, ಸದಸ್ಯರಾದ ಡಾ. ಬಾಲಕೃಷ್ಣ ಹೆಗಡೆ, ಪ್ರಾಧ್ಯಾಪಕ ಎನ್. ಉಜ್ಜಿನಪ್ಪ, ಬಿ. ಸಾಕಮ್ಮ, ಡಾ. ರಮೇಶ್, ಡಾ. ಈಶ್ವರ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!