ಶಿವಮೊಗ್ಗ

ಜಾನುವಾರು ಹರಾಜು ತಡೆದ ಗ್ರಾಮಸ್ಥರು

ಸೊರಬ:  ನಿರ್ವಹಣೆ ಮಾಡಲಾಗುವುದಿಲ್ಲ ಎಂದ ಮೇಲೆ ಕಾಣಿಕೆ ರೂಪದಲ್ಲಿ ಸ್ವೀಕರಿಸಲು ಮುಂದಾಗಬೇಡಿ ಎಂದು ಚಂದ್ರಗುತ್ತಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ನಡೆಯಬೇಕಿದ್ದ ಜಾನುವಾರು ಹರಾಜು ಪ್ರಕ್ರಿಯೆಯನ್ನು  ತಡೆಹಿಡಿದರು.
ಮುಜರಾಯಿ ಇಲಾಖೆಗೆ ಒಳಪಟ್ಟ ಇಲ್ಲಿನ ರೇಣುಕಾಂಬ ದೇಗುಲದ ಕಾಣಿಕೆ ಜಾನುವಾರುಗಳ ಹರಾಜು ಪ್ರಕ್ರಿಯೆ ಮಂಗಳವಾರ ನಡೆಸ ಬೇಕಾಗಿತ್ತು.
ಈ ರೀತಿ ಹರಾಜುನಲ್ಲಿ ಕಡಿಮೆ ಬೆಲೆಗೆ ಹರಾಜು ಹಿಡಿದ ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸಲಾಗುತ್ತಿದೆ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ. ಈ ಹಿನ್ನಲೆಯಲ್ಲಿ ಅವರು, ಕಾಣಿಕೆಯಾಗಿ ಪಡೆದ ಗೋವುಗಳನ್ನು ಕಸಾಯಿ ಖಾನೆಗೆ ಕಳಿಸುವುದಲ್ಲ, ಸಾಧ್ಯವಾದರೆ ದೇಗುಲ ಸಮಿತಿಯೇ ಅಂತಹ ಹಸು, ಕರುಗಳನ್ನು ಸಾಕಬೇಕು.  ಗ್ರಾಮಸ್ಥರಿಗೆ ಇಚ್ಚೆ ಇದ್ದಲ್ಲಿ ಒಪ್ಪಂದ ಮಾಡಿ ಕೊಂಡು ಸಾಕಿ, ಸಲುಹುವ ಉದ್ದೇಶವಿರಿಸಿ ಅವರಿಗೆ ನೀಡಬೇಕು. ಇಲ್ಲವೆ ಯಾವುದಾದರೂ ಗೋಶಾಲೆಗೆ ಕಳುಹಿಸಬೇಕು. ಹಣದಾಸೆಗೆ ಜಾನುವಾರು ಬಲಿ ಕೊಡುವುದನ್ನು ನಾವು ಸಹಿಸುವುದಿಲ್ಲ ಎಂದು ಪಟ್ಟು ಹಿಡಿದು ಹರಾಜು ನಿಲ್ಲಿಸಿದರು.
ಗ್ರಾಮದ ಮುಖಂಡ ಪ್ರಸನ್ನಶೇಟ್, ಅಪ್ರಮೇಯಭಟ್, ಎಂ.ಕುಮಾರ್, ಪರುಶರಾಮಬೋವಿ, ಚೇತನ, ಪ್ರಕಾಶ್, ಗಣಪತಿ, ಶ್ಯಾಮ್, ಪ್ರಭಾಕರ ಶೇಟ್, ರತ್ನಾಕರ್, ಶಶಿಕಲಾ ಮುಂತಾದವರು ಇದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ