ಶಿವಮೊಗ್ಗ

ಯೂತ್ ಹಾಸ್ಟೆಲ್ ಸಭೆ 29ರಂದು

ಶಿವಮೊಗ್ಗ:  ನಗರದ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಸರ್ವಸದಸ್ಯರ ಸಭೆಯನ್ನು ಜೂ.29ರಂದು ಸಂಜೆ 6.30 ಗಂಟೆಗೆ ನಗರದ ಮಥುರಾ ಪ್ಯಾರಾಡೈಸ್‌ನಲ್ಲಿ ಘಟಕದ ಅಧ್ಯಕ್ಷ ಅ.ನಾ.ವಿಜಯೇಂದ್ರ ರಾವ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಕಾರ್ಯದರ್ಶಿ ವಿಜಯಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಘಟಕದ ನೂತನ ಕಾರ್ಯಕಾರಿ ಸಮಿತಿಯ ರಚನೆ ಹಾಗೂ ಅಂತಾರಾಷ್ಟ್ರೀಯ ಚಾರಣದಲ್ಲಿ ಭಾಗವಹಿಸಿದ ಸಾಹಸಿಗಳಿಗೆ, ಹಿಮಾಲಯ ಪ್ರಕೃತಿ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಮತ್ತು ಧಾರವಾಡದ ಸಾಹಸಿ ಅಂತಾರಾಷ್ಟ್ರೀಯ ಚಾರಣಿಗ ಹೇಮಂತ್ ಗೋಖಲೆ ಅವರನ್ನು ಗೌರವಿಸಲಾಗುವುದು. ಎಲ್ಲಾ ಸದಸ್ಯರು ಆಗಮಿಸುಂತೆ ಕೋರಿದ್ದಾರೆ.


ಭೂಪರಿಗ್ರಹ ಕಾರ್ಯಕ್ರಮ 29ರಂದು


ಹೊಸನಗರ:  ಇಲ್ಲಿನ ಶ್ರೀರಾಮಚಂದ್ರಾಪುರ ಮಠದ ಹೊಸನಗರ ಪ್ರಧಾನ ಮಠದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಪುನರ್ ನವ ನಿರ್ಮಾಣ ಕಾರ್ಯಕ್ಕೆ 29ರಂದು ಭೂಪರಿಗ್ರಹ ಕಾರ್ಯಕ್ರಮ ನಡೆಯಲಿದೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ವೈ.ವಿ. ಕೃಷ್ಣಮೂರ್ತಿ ತಿಳಿಸಿದ್ದಾರೆ. ಪುನರ್‌ನವ ಸಮಿತಿಯ ನೇತೃತ್ವದ ಕಾರ್ಯಕ್ರಮದಲ್ಲಿ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗ್ಗೆ 11.47 ಗಂಟೆಗೆ ಸಮಸ್ತ ಶಿಷ್ಯಭಕ್ತರ ಸಮಕ್ಷಮ ಈ ವಿಶೇಷ ಕಾರ್ಯಕ್ರಮ ಜರುಗಲಿದೆ. 2.30 ಗಂಟೆಯಿಂದ ಶ್ರೀಭಾರತೀ ಗುರುಕುಲದ ಅಮೃತಮಯೀ ಸಭಾಭವನದಲ್ಲಿ ಶಿಷ್ಯಭಕ್ತರಿಂದ ಬೊಗಸೆ ನಾಣ್ಯ ಸಮರ್ಪಣೆ ಕಾರ್ಯಕ್ರಮವಿದೆ. ಸೇವೆ ಸಲ್ಲಿಸುವ ಸುವರ್ಣ ಅವಕಾಶಕ್ಕೆ ಎಲ್ಲರೂ ಭಾಗಿಗಳಾಗಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ