ಸೊರಬ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಂತೆ ಹಾಗೂ ಉಳಿದ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ ನಡೆಯಿತು. ಹರಾಜು ಪ್ರಕ್ರಿಯೆಯಲ್ಲಿ ಸುಂಕಗಳ ವಸೂಲಿಗಾಗಿ ಸಂತೆ ಮಾರುಕಟ್ಟೆ ರು. 3.75ಲಕ್ಷ, ಮಾಂಸ ಮಾರುಕಟ್ಟೆ 1.65 ಲಕ್ಷ, ಹಸಿ ಮೀನು ಮಾರುಕಟ್ಟೆ ರು. 1.50 ಲಕ್ಷ, ಬಸ್ ನಿಲ್ದಾಣ ರು. 39 ಸಾವಿರಗಳಿಗೆ ಹರಾಜಾಯಿತು. ಲೋಕಸಭಾ ಚುನಾವಣೆ ಪ್ರಕ್ರಿಯೆಯಿಂದಾಗಿ ಮೂರು ತಿಂಗಳು ತಡವಾಗಿ ಹರಾಜು ಪ್ರಕ್ರಿಯೆ ನಡೆದಿದ್ದು, ಕೇವಲ 9 ತಿಂಗಳ ಅವಧಿಗೆ ಮಾತ್ರ ಹರಾಜು ಮಾಡಲಾಗಿದೆ. ಕಳೆದ ವರ್ಷ ನಾಲ್ಕು ಮಾರುಕಟ್ಟೆಗಳಿಂದ 12 ತಿಂಗಳ ಅವಧಿಗೆ ರು. 2,30,850 ಲಕ್ಷ ಆದಾಯ ಬಂದಿತ್ತು. ಈ ವರ್ಷ ಕೇವಲ 9 ತಿಂಗಳ ಅವಧಿಗೆ ರು. 7.29 ಲಕ್ಷಕ್ಕೆ ಹರಾಜು ನಡೆದಿದ್ದು, ಒಟ್ಟಾರೆ ಪ.ಪಂ.ಗೆ ರು. 4,98,135 ಲಕ್ಷ ಹೆಚ್ಚು ಆದಾಯ ದೊರಕಿದಂತಾಗಿದೆ ಎಂದು ಪಪಂ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ ತಿಳಿಸಿದರು. ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಮಂಚಿ ಹನುಮಂತಪ್ಪ, ಡಿ.ಆರ್.ಶ್ರೀಧರ್, ಮಹೇಶ್ಗೌಳಿ, ಎಂ.ಡಿ.ಉಮೇಶ್, ಮೆಹಬೂಬಿ, ಸುಜಾಯತ್ವುಲ್ಲಾ, ನಾಗರತ್ನಮ್ಮ ಮುಖ್ಯಾಧಿಕಾರಿ ಕೆ.ಸುರೇಶ್, ಸಂತೋಷ್, ಲಾಜರ್, ನಾಗರಾಜ್ ಮತ್ತಿತರರು ಹಾಜರಿದ್ದರು.