ತುಮಕೂರು

ಕಿರುಧಾನ್ಯ ಉಳಿವಿಗಾಗಿ ನಡಿಗೆ

ತುಮಕೂರು: ಧಾನ್ ಪೌಂಡೇಶನ್ ಸಂಸ್ಥೆ ವತಿಯಿಂದ ಕಿರುಧಾನ್ಯಗಳ ಉಳಿವಿಗಾಗಿ ನಡಿಗೆ ಕಾರ್ಯಕ್ರಮ ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಜೀವ ವೈವಿಧ್ಯತೆ ಹಾಗೂ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಮತ್ತು ನಶಿಸಿ ಹೋಗುತ್ತಿರುವ ಕಿರುಧಾನ್ಯಗಳಾದ ಬಾರ್ಲಿ, ಊದಲು, ಬರಗು, ಆರ್ಕೆ, ಸಾಮೆ, ಸಜ್ಜೆ, ರಾಗಿ, ನವಣೆ, ಜೋಳ ಇತ್ಯಾದಿಗಳ ಉಳಿವಿಗಾಗಿ  ನಡಿಗೆ ಎನ್ನುವ ವಿಷಯದ ಮೇಲೆ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಕಳಂಜಿಯಂ ಸಂಘದ ಸದಸ್ಯರು, ಶಾಲಾ -ಕಾಲೇಜು ವಿದ್ಯಾರ್ಥಿಗಳು, ತುಮಕೂರು ನಾಗರಿಕರು ಪಾಲ್ಗೊಂಡಿದ್ದರು.
ಕಿರುಧಾನ್ಯಗಳ ವಿಶಿಷ್ಟತೆ, ಉಪಯೋಗ: ಕಿರುಧಾನ್ಯಗಳಿಂದ ಆಹಾರ, ಪೌಷ್ಟಿಕಾಂಶ ಭದ್ರತೆ ಸಾಧ್ಯ. ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆ. ಇತರೆ ಬೆಳೆಗಳಿಗೆ ಹೋಲಿಸಿದರೆ ಕಿರುಧಾನ್ಯಗಳು ಶೇ. 25 ರಷ್ಟು ಮಳೆ ನೀರಿನಲ್ಲಿ ಬೆಳೆಯಬಹುದಾದಂತಹ ಬೆಳೆ. ರೈತರಿಗೆ ಬೆಳೆ ನಾಶದ ಭಯವಿರುವುದಿಲ್ಲ. ಬಡಜನತೆಗೆ, ಮಹಿಳೆಯರಿಗೆ ಅವಶ್ಯವಿರುವ ಪೌಷ್ಟಿಕಾಂಶದ ಲಭ್ಯತೆ ಹೇರಳವಾಗಿ ಸಿಗುತ್ತದೆ. ಈ ಕಿರು ಧಾನ್ಯಗಳು ಪ್ರಕೃತಿಯ ವರದಾನ. ಕಾರಣ ಅದರಲ್ಲಿ ಪ್ರೋಟೀನ್‌ಯುಕ್ತ ಮತ್ತು ಸಮತೋಲನ ಜೀವಸತ್ವಗಳು ಲಭ್ಯವಿದ್ದು, ಮಾನವ  ಇತರೆ ಆಹಾರಗಳಿಗೆ ಮೊರೆ ಹೋಗದೆ ಉಪಯೋಗಿಸಬಹುದಾದ ಆಹಾರಗಳಾಗಿವೆ. ಇವುಗಳ ಉಪಯೋಗವನ್ನು ಅಕ್ಕಿ, ಗೋಧಿಯೊಂದಿಗೆ ಹೋಲಿಕೆ ಮಾಡಿದಾಗ ಮೇಲ್ಕಂಡ ಧಾನ್ಯಗಳು ಅತ್ಯತ್ತಮವಾದ ಧಾನ್ಯಗಳಾಗಿವೆ. ಇವುಗಳನ್ನು ಅಲ್ಪಾವಧಿಯಲ್ಲಿ ಒಣ ಬೇಸಾಯ ಪದ್ಧತಿಯಲ್ಲಿ ಬೆಳೆಯಬಹುದಾಗಿದೆ.
3 ರಿಂದ 5 ಕಿಮೀ ಕಾಲ್ನಡಿಗೆ: 3 ರಿಂದ 5 ಕಿಮೀ ಕಾಲ್ನಡಿಗೆ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು ಕಿರುಧಾನ್ಯಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮವನ್ನು ಎಸ್‌ಬಿಎಂ, ಕಾರ್ಪೋರೇಷನ್ ಬ್ಯಾಂಕ್, ಕೃಷಿ ಇಲಾಖೆ, ಬೆಳ್ಳಿ ಫೌಂಡೇಶನ್, ಕಾವೇರಿ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್, ನಬಾರ್ಡ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ನಡಿಗೆ ಟೌನ್‌ಹಾಲ್ ಸರ್ಕಲ್‌ನಿಂದ ಆರಂಭಗೊಂಡು, ಚರ್ಚ್ ಸರ್ಕಲ್ ಮುಖಾಂತರ, ಗುಂಚಿ ಸರ್ಕಲ್ ಮೂಲಕ ಬಾರ್‌ಲೈನ್ ರಸ್ತೆ, ಬಿಎಚ್ ರಸ್ತೆ ಮೂಲಕ ಕೇಂದ್ರ ಗ್ರಂಥಾಲಯದ ಆವರಣ ತಲುಪಿತು.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಜಿಪಂ ಸಿಇಓ ಗೋವಿಂದರಾಜು, ತಹಸೀಲ್ದಾರ್ ಅಹೋಬಲಯ್ಯ, ಧಾನ್ ಪೌಂಡೇಶನ್ ಪ್ರಾದೇಶಿಕ ಸಂಯೋಜಕ ಎಚ್.ಸಿ. ಗೌಡ, ಜಿಪಂ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ನಗರಸಭಾಧ್ಯಕ್ಷೆ ಗೀತಾ ರುದ್ರೇಶ್, ನಬಾರ್ಡ್ ಎಜಿಎಂ ವೀರಭದ್ರನ್, ಸಿಕೆಜಿಬಿ ಪ್ರಾದೇಶಿಕ ವ್ಯವಸ್ಥಾಪಕ ಜಯರಾಮಯ್ಯ,  ಕೃಷಿ ಇಲಾಖೆಯ ಎಲ್.ಬಿ. ನಾಯಕ್ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ