ತುಮಕೂರು

ನನಗೇನು ತಿಳಿಯದು: ಸಚಿವ ಶಿವಣ್ಣ

ತುಮಕೂರು: ಮದ್ಯ ಕರ್ನಾಟಕದ 9 ಜಿಲ್ಲೆಗಳ ಕುಡಿಯುವ ನೀರಿನ ಹಾಗೂ 9200 ಕೆರೆಗಳನ್ನು ತುಂಬಿಸುವ ವಾಟರ್ಗ್ರಿಡ್ ಕೆನಾಲ್ ಬಗ್ಗೆ ತಮಗೆ ಮಾಹಿತಿಯಿಲ್ಲ. ಗೊತ್ತಿಲ್ಲ. ಆದರೆ ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿ ಬಗ್ಗೆ ಗೌರವವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಸ್ಪಷ್ಟಪಡಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ತಾವು ಸರ್ಕಾರದ ಒಂದು ಭಾಗ ನಿಜ. ಆದರೆ ನೀರಾವರಿ ಯೋಜನೆ, ಪರಮಶಿವಯ್ಯ ವರದಿ, ಎತ್ತಿನ ಹೊಳೆ ಯೋಜನೆ, ಹೇಮಾವತಿ ಪ್ಲಡ್ ಕೆನಾಲ್ಗಳನ್ನು ಒಟ್ಟುಗೂಡಿಸಿ ವಾಟರ್ಗ್ರಿಡ್ ಕೆನಾಲ್ ರೂಪಿಸುವ ಕುರಿತ ಮಾಹಿತಿ ತಮ್ಮ ಬಳಿಯಿಲ್ಲ.
 ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿರುವುದು ಸರಿ ಎಂದು ರಾಜ್ಯ ಸರ್ಕಾರದ ತೀರ್ಮಾನವನ್ನು ಬಲವಾಗಿ ಸಮರ್ಥಿಸಿಕೊಂಡರು.
ಪ್ರತಿಭಟನೆಗೆ ಬೆಂಬಲವಿಲ್ಲ: ತಮ್ಮದೇ  ಬಿಜೆಪಿ ಸರ್ಕಾರ 3 ಜನ ಮುಖ್ಯ ಎಂಜಿನಿಯರ್ಗಳು ನೀಡಿದ ವಾಟರ್ಗ್ರಿಡ್ ಕೆನಾಲ್ ನಿರ್ಮಾಣದ ಬಗ್ಗೆ ತಮಗೆ ಮಾಹಿತಿಯಿಲ್ಲವೇ ಸರ್ಕಾರವೇ ನೇಮಿಸಿದ ಸಮಿತಿ ನೀಡಿದ ವರದಿಯನ್ನು ಸರ್ಕಾರ ಪರಿಗಣಿಸಬೇಕಲ್ಲವೇ ಎಂಬ ಪ್ರಶ್ನೆಗೂ ಸಚಿವರು ಸಮರ್ಪಕ  ಉತ್ತರ ನೀಡಲಿಲ್ಲ ವಾಟರ್ಗ್ರಿಡ್ ಕೆನಾಲ್ ಕಡೆಗಣಿಸಿರುವ ರಾಜ್ಯ ಸರ್ಕಾರದ ವಿರುದ್ದ ಸಂಸದ ಜಿ.ಎಸ್. ಬಸವರಾಜು ಹಾಗೂ 9 ಜಿಲ್ಲೆಗಳಲ್ಲಿ ಜ. 11 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ತಮ್ಮ ಬೆಂಬಲವಿಲ್ಲ.  ತಾವೊಬ್ಬ ಸಚಿವರಾಗಿ ಪ್ರತಿಭಟನೆಗೆ ಬೆಂಬಲ ನೀಡಲಾರೆ ಎಂದರು.
ಶ್ರೀಗಳ ಪತ್ರಗಳಿಗೆ ಬೆಂಬಲಿಸೋದು ಸರ್ಕಾರಕ್ಕೆ ಬಿಟ್ಟದ್ದು: ವಾಟರ್ಗ್ರಿಡ್ ಕೆನಾಲ್ ಬೆಂಬಲಿಸಿ, ಶೀಘ್ರ ಕಾರ್ಯಾಚರಣೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಸಿದ್ದಗಂಗಾ ಹಾಗೂ ಆದಿಚುಂಚನಗಿರಿ ಶ್ರೀಗಳ ಪತ್ರಗಳಿಗೆ ಸ್ಪಂದಿಸೋದು ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್, ಎಂಎಸ್ಐಎಲ್ ಅಧ್ಯಕ್ಷ ನಂದೀಶ್, ಮಾಜಿ ಶಾಸಕ ಗಂಗಹನುಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲ ಗಂಗಹನುಮಯ್ಯ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!