ತುಮಕೂರು: ವಾಟರ್ ಗ್ರಿಡ್ ಕೆನಾಲ್ ಯೋಜನೆ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ವಿವಿಧ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದರು.
ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ಸ್ವಾಮಿ, ಗೋಡೇಕೆರೆಯ ಸಿದ್ಧರಾಮದೇಶಿಕೇಂದ್ರ ಸ್ವಾಮಿ, ಮೃತ್ಯುಂಜಯ ದೇಶಿ ಕೇಂದ್ರ ಸ್ವಾಮಿ, ಮಾದಿಹಳ್ಳಿ ಮಠದ ಸ್ವಾಮೀಜಿ, ಉರವಕೊಂಡ ಮಠದ ಕರಿಬಸವ ಚನ್ನಬಸವೇಶ್ವರ ರಾಜೇಂದ್ರಸ್ವಾಮಿ, ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮಿ, ಚಿಕ್ಕತೊಟ್ಲುಕೆರೆಯ ಅಟವಿ ಶಿವಲಿಂಗ ಸ್ವಾಮಿ, ಬೆಳ್ಳಾವಿ ಕಾರದ ಮಠದ ವೀರಭದ್ರಸ್ವಾಮಿ, ತವಡೆಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮಿ, ಕುಪ್ಪೂರಿನ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಹರಳೂರಿನ ಜಂಗಮ ಮಠದ ಸ್ವಾಮಿ, ತಿಪಟೂರಿನ ಇಮ್ಮಡಿ ಕರಿಬಸವದೇಶಿ ಕೇಂದ್ರ ಸ್ವಾಮೀಜಿ, ಹೊರಪೇಟೆಯ ಕ್ಯಾಥೋಲಿಕ್ ಚರ್ಚ್ನ ಫಾದರ್ ವಿಜಯಕುಮಾರ್, ಮುತುವಲ್ಲಿಗಳಾದ ಶಮೀರ್ ಅಹ್ಮದ್, ಮುಸ್ತಾಕ್ ಅಹಮದ್, ಕೌಸರ್ ಅಹಮದ್ ಪಾಲ್ಗೊಂಡಿದ್ದರು.