ಕೊರಟಗೆರೆ: ಗಣರಾಜ್ಯೋತ್ಸವ ಮತ್ತು ದಿ.ಡಾ.ವಿಷ್ಣುವರ್ಧನ ಸ್ಮರಣಾರ್ಥ ಕೊರಟಗೆರೆ ಸ್ಟೋರ್ಟ್ಸ್ ಕ್ಲಬ್ ವತಿಯಿಂದ ಪಟ್ಟಣದಲ್ಲಿ 26 ಮತ್ತು 27 ರಂದು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಆಸಕ್ತ ತಂಡಗಳು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಕೊರಟಗೆರೆ ಸ್ಟೋಟ್ಸ್ ಕ್ಲಬ್ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ 26 ಮತ್ತು 27ರಂದು ನಡೆಯುತ್ತಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ವಿಷ್ಣು ಕಪ್-2013 ಪಂದ್ಯಾವಳಿಗೆ 25ರ ಒಳಗಾಗಿ ನಿಗದಿತ ಶುಲ್ಕದೊಂದಿಗೆ ನೋಂದಾಯಿಸಿ ಕೊಳ್ಳುವಂತೆ ಕೋರಲಾಗಿದೆ. ವಿವರಕ್ಕೆ: 97415-77432, 99869-08769) ಇಲ್ಲಿಗೆ ಸಂಪರ್ಕಿಸಿ.
26ರಿಂದ ಸಂಸ್ಕ ೃತ ವಿದ್ಯಾರ್ಥಿ ಸಮ್ಮೇಳನ
ತುಮಕೂರು: ತುಮಕೂರು ವಿವಿ, ಸಂಸ್ಕೃತ ಭಾರತೀ-ಕರ್ನಾಟಕ ಇವರ ಆಶ್ರಯದಲ್ಲಿ ಜ.26 ಹಾಗೂ 27 ರಂದು ರಾಜ್ಯಮಟ್ಟದ ಸಂಸ್ಕೃತ ವಿದ್ಯಾರ್ಥಿ ಸಮ್ಮೇಳನ ತುಮಕೂರು ವಿವಿಯಲ್ಲಿ ಏರ್ಪಡಿಸಲಾಗಿದೆ ಎಂದು ತುಮಕೂರು ವಿವಿ ಕುಲಪತಿ ಡಾ. ಶಿವಲಿಂಗಯ್ಯ ತಿಳಿಸಿದ್ದಾರೆ. ಸಮ್ಮೇಳನದ ಅಂಗವಾಗಿ ಸಂಸ್ಕೃತ ಪ್ರದರ್ಶಿನಿ ಏರ್ಪಡಿಸಲಾಗಿದೆ. ಅದನ್ನು ಸಮ್ಮೇಳನಕ್ಕೆ ಪೂರ್ವಭಾವಿಯಾಗಿ 25ರಂದು ಸಂಜೆ ಉದ್ಘಾಟಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಉದ್ಘಾಟನೆ ನೆರವೇರಿಸಲಿದ್ದು, ತುಮಕೂರು ವಿವಿ ಕುಲಪತಿ ಡಾ.ಎಸ್.ಸಿ.ಶರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. 26 ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಏರ್ಪಾಟಾಗಿದ್ದು, ಬೆಂಗಳೂರಿನ ಗ್ಲೋಬಲ್ಸ್ ಸಂಸ್ಥೆಯ ಸಿಇಒ ಹಾಗೂ ಅಧ್ಯಕ್ಷ ಸುಹಾಸ್ ಗೋಪಿನಾಥ್ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಡಾ. ಹುಲಿನಾಯ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
26 ರಂದು ಹೊನಲು ಬೆಳಕಿನ ಶೆಟಲ್ ಕಾಕ್
ತುರುವೇಕೆರೆ: ಪಟ್ಟಣದ ಚೀತಾ ಸ್ಫೋಟ್ಸ್ ಕ್ಲಬ್ ಜ.26, 27ರಂದು ತಾಲೂಕುಮಟ್ಟದ ಹೊನಲು ಬೆಳಕಿನ ಶೆಟಲ್‌ಕಾಕ್ ಪಂದ್ಯಾವಳಿ ಮೂಲೆಶಂಕರೇಶ್ವರ ಸ್ವಾಮಿ ದೇವಾಲಯದ ಬಳಿ ಆಯೋಜಿಸಲಾಗಿದೆ. ಪ್ರತಿದಿನ 6 ಗಂಟೆಯಿಂದ ಪಂದ್ಯಾವಳಿ ನಡೆಯಲಿದೆ.
ಇಂದು ಬಿಜೆಪಿ ಸಭೆ
ಕುಣಿಗಲ್: ತಾಲೂಕಿನ ಅಮೃತೂರಿನ ಕೊಡಿಗೆಹಳ್ಳಿ ಬಡಾವಣೆಯ ಲಕ್ಷೀ ವೆಂಕಟೇಶ್ವರ ಕಲ್ಯಾಣ ಮಂಟಪದ ಅವರಣದಲ್ಲಿ 24ರಂದು ಅಮೃತೂರು ಹೋಬಳಿ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಉಪ ಮುಖ್ಯಮಂತ್ರಿ ಆರ್.ಅಶೋಕ ಸಭೆ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಸಚಿವ ಸುರೇಶ್ ಕುಮಾರ್, ಶಾಸಕರಾದ ಸುರೇಶ್‌ಗೌಡ ಇತರರು ಭಾಗವಹಿಸುವರು.