ತುಮಕೂರು

ಸೂರಿಗಾಗಿ ನಗರಸಭೆಗೆ ಪಾದಯಾತ್ರೆ

ತುಮಕೂರು: ತುಮಕೂರು ನಗರ ವ್ಯಾಪ್ತಿಯ ಲಿಂಗಾಪುರ ಸುತ್ತಮುತ್ತಲಿನ ನಿವೇಶನ ರಹಿತರು ಅಖಿಲ ಭಾರತ ಯುವಜನ  ಫೆಡರೇಷ್‌ನ್ ವತಿಯಿಂದ ಲಿಂಗಾಪುರದಿಂದ ಕಾಲ್ನಡೆಗೆ ಮೂಲಕ ನಗರಸಭೆಗೆ ತಲುಪಿ ಅರ್ಜಿ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಎಐವೈಎಫ್ ಜಿಲ್ಲಾ ಕಾರ್ಯದರ್ಶಿ ವಾಸುದೇವಕುಮಾರ್ ಹಮಾಲಿಗಳು, ಬಡವರು, ಕೂಲಿ ಕಾರ್ಮಿಕರನ್ನು ರಾಜಕೀಯ ನೇತಾರರು ಓಟ್ ಬ್ಯಾಂಕ್ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಆದರೆ ಇವರ ಸಮಸ್ಯೆಗಳನ್ನು ಯಾರೊಬ್ಬರು ಕೇಳುತ್ತಿಲ್ಲ. ಹೀಗಾಗಿ ಅವರಿಗೆ ಕನಿಷ್ಟ ಸೂರು ಕೂಡ ಇಲ್ಲದಂತಾಗಿದೆ. ಸ್ವಂತ ನಿವೇಶನ ಪಡೆಯುವುದು ಅವರಿಗೆ ಕನಸಿನ ವಿಷಯವಾಗಿದೆ. ಇದಕ್ಕೆ ಇರುವ ಏಕೈಕ ಮಾರ್ಗವೆಂದರೆ ಹೋರಾಟ ಮಾತ್ರ ಎಂದರು.
ಕಾರ್ಮಿಕ ಮುಖಂಡ ಗಿರೀಶ್ ಮಾತನಾಡಿ ನಮ್ಮನ್ನಾಳುವ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ ರೈತರ ಸಾವಿರಾರು ಎಕರೆ ಜಮೀನನ್ನು ವಿದೇಶಿಯರಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಆದರೆ ಈ ದೇಶ ಕಟ್ಟಿದವರಿಗೆ ಸೂರು ನೀಡದಿರುವುದು ಜನವಿರೋಧಿ ನೀತಿಯಾಗಿದೆ ಎಂದರು. ಎವೈಎಫ್ ಜಿಲ್ಲಾಧ್ಯಕ್ಷ ಶಶಿಕಾಂತ್ ಮಾತನಾಡಿ ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾದ್ಯಂತ ನಿವೇಶನ ರಹಿತರನ್ನು ಸಂಘಟಿಸುತ್ತಿದ್ದು ಸಂಘಟನೆ ಮೂಲಕ ಅರ್ಜಿ ಸಲ್ಲಿಸಿ ಹೋರಾಟ ಮಾಡಲು ಮುಂದೆ ಬರಬೇಕು ಎಂದರು.
ಕಾರ್ಮಿಕ ಮುಖಂಡ ಕಂಬೇಗೌಡ, ಚಿನ್ನಪ್ಪ, ಇಫ್ತಾ ಜಿಲ್ಲಾ ಮುಖಂಡ ಗೌಡರಂಗಪ್ಪ, ಅಶ್ವತ್ಥ್ ನಾರಾಯಣ್, ಚಂದ್ರು, ಮಹಿಳಾ ನಾಯಕಿ ಜ್ಯೋತಿ, ಚಂದ್ರಪ್ಪ, ಕಲ್ಪನ, ಲಕ್ಷ್ಮಮ್ಮ, ನಾಗರತ್ನ, ಪುಟ್ಟಲಕ್ಷ್ಮಮ್ಮ, ಜಯಮ್ಮ ಉಪಸ್ಥಿತರಿದ್ದರು. ನಂತರ ಆಯುಕ್ತರು ನಿವೇಶನ ರಹಿತರ ಅರ್ಜಿ ಸ್ವೀಕರಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!