ತುಮಕೂರು

ಎಲೆಯಂತೆ ತೇಲುವ 5.8 ವರ್ಷದ ಬಾಲಕ

-ಎಸ್.ನಾಗಭೂಷಣ.
ತುರುವೇಕೆರೆ: ಇನ್ನೂ 5 ವರ್ಷ 8 ತಿಂಗಳ ಯಶ್ವಂತ್ ಗೌಡ ಇಲ್ಲಿಯ ಇಂಡಿಯನ್ ಪಬ್ಲಿಕ್ ಸ್ಕೂಲ್‌ನ ಒಂದನೇ ತರಗತಿ ವಿದ್ಯಾರ್ಥಿ. ಇವ ಒಂದೆರೆಡು ತಿಂಗಳಿನಿಂದ ಮಾತ್ರ ಈಜು ಕಲಿಯುತ್ತಿದ್ದು, ಕಳೆದ ಆರೇಳು ದಿನಗಳಿಂದೀಚೆಗೆ ಇವನಿಗೆ ನೀರಿನಲ್ಲಿ ಗಂಟೆಗಟ್ಟಲೆ ತೇಲುವ ಕಲೆ ಸಿದ್ಧಿಸಿಕೊಂಡಿದ್ದಾನೆ. ಕೈಕಾಲುಗಳನ್ನು ಆಡಿಸದೇ ಎಲೆಯಂತೆ ತೇಲಿ ಎಲ್ಲರ ಹುಬ್ಬೇರುಸುವಂತೆ ಮಾಡಿದ್ದಾನೆ. ಈ ಚೋಟುದ್ದದ ಬಾಲಕ ಈಗ ತಾಲೂಕಿನ ಮನೆ ಮನೆ ಮಾತಾಗಿದ್ದಾನೆ.
ಇಲ್ಲಿಯ ಇಂಡಿಯನ್ ಪಬ್ಲಿಕ್ ಶಾಲೆಯ ಈಜು ಕೊಳದಲ್ಲಿ ಇವನ ಕಲೆ ಪ್ರದರ್ಶಿಸಲಾಯಿತು. ಯಶ್ವಂತ್ ಗೌಡನಿಗೆ ದಂಡಿನಶಿವರ ತಿಮ್ಮೇಗೌಡ ತರಬೇತಿ ನೀಡಿದ್ದಾರೆ. ಬಾಲಕ ಯಶ್ವಂತ್ ಗೌಡನನ್ನು ತರಬೇತುದಾರರು ನೀರಿಗೆ ಎಸೆದರೆ, ನೀರಿನಲ್ಲಿ ಮುಳುಗದೇ ಎಲೆಯಂತೆ ತೇಲುತ್ತಾನೆ. ಯಶ್ವಂತ್ ನೀರಿನೊಳಗೇ ಬಿದ್ದ ಕೂಡಲೇ ನೆರೆದಿದ್ದವರ ಎದೆ ಝಲ್ ಎನ್ನದೇ ಇರದು. ನೀರಿಗೆ ಬಿದ್ದ ಕೂಡಲೇ ನಗುವ ಮೂಲಕ ಎದೆ ಬಿಗಿ ಹಿಡಿದುಕೊಂಡಿದ್ದವರನ್ನು ಕ್ಷಣ ಕಾಲ ನಗಿಸಿ, ಆತಂಕ ದೂರ ಮಾಡುತ್ತಾನೆ.
ಈಜು ಪ್ರಾರಂಭ: ದಂಡಿನ ಶಿವರ ತಿಮ್ಮೇಗೌಡ ಇಲ್ಲಿಯ ಸಾರಿಗೇಹಳ್ಳಿ ಕೆರೆಯಲ್ಲಿ ಹಲವು ಮಕ್ಕಳಿಗೆ ಬೆಳಗ್ಗೆ 5 ಗಂಟೆಯಿಂದಲೇ ಈಜು ಕಲಿಸುತ್ತಾರೆ. ಒಮ್ಮೆ ಈ ಯಶ್ವಂತ್‌ನ ಸೋದರಿ ಈಜು ಕಲಿಯಲು ತೆರಳಿದ್ದಳು. ಇವಳೊಂದಿಗೆ ಬಂದಿದ್ದ ಯಶ್ವಂತ್ ನೀರಿನಲ್ಲಿ ಆಟ ಆಡಲು ಶುರುವಿಟ್ಟುಕೊಂಡಿದ್ದ. ಇವನ ಆಸಕ್ತಿ ಗಮನಿಸಿದ್ದ ತಿಮ್ಮೇಗೌಡರು ಟ್ಯೂಬ್ ಸಹಾಯದಿಂದ ಆರಂಭದಲ್ಲಿ ಈಜು ಕಲಿಸಿದರು. ಕ್ರಮೇಣ ಟ್ಯೂಬ್‌ಗೆ ವಿದಾಯ ಹೇಳಿದ ಯಶ್ವಂತ್ ಗೌಡ ತಾನೇ ಈಜಲು ಶುರು ಮಾಡಿದ. ಕೆರೆಯ ಏರಿಯ ಬಳಿ ಸುಮಾರು ಇನ್ನೂರು ಮೀಟರ್‌ಗೂ ಹೆಚ್ಚು ದೂರ ಒಬ್ಬನೇ ನೀರಿನಲ್ಲಿ ಈಜಲು ಆರಂಭಿಸಿದ.
ಇತ್ತೀಚೆಗೆ ಕೆರೆಗೆ ದುಮುಕಿದ ಯಶ್ವಂತ್ ಎಲೆಯಂತೆ ತೇಲಲಾರಂಭಿಸಿದ. ಅದೂ ಹತ್ತಾರು ನಿಮಿಷಗಳ ಕಾಲ. ಕೈಕಾಲು ಆಡಿಸದೇ ಸ್ಥಬ್ದವಾಗಿ ತೇಲಿದ. ಬಹಳ ಆಶ್ಚರ್ಯಗೊಂಡ ತಿಮ್ಮೇಗೌಡರು ಈ ಚಿಕ್ಕ ವಯಸ್ಸಿಗೇ ತಾನಾಗಿ ಬಂದಿರುವ ಕಲೆಗೆ ರೂಪ ಕೊಡಬೇಕೆಂದು ನಿಶ್ಚಯಿಸಿ ಶಾಲೆಯಲ್ಲಿ ಮಾಧ್ಯಮಗಳ ಮುಂದೆ ಯಶ್ವತ್ ಗೌಡನ ಪ್ರತಿಭೆ ಸಾದರ ಪಡಿಸಿದರು. ಮುಂಬರುವ ದಿನಗಳಲ್ಲಿ ಇವನು ಈಜಿನಲ್ಲಿ ಸಾಧನೆ ಮಾಡಲು ತಮಗೆ ಸಾಧ್ಯವಾಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ ಎನ್ನುತ್ತಾರೆ ಇವರ ತಂದೆ ಯಡಿಯೂರಿನ ಹೇಮಾವತಿ ನಾಲಾ ಇಲಾಖೆಯಲ್ಲಿ ಜೀಪ್ ಡ್ರೈವರ್ ಆಗಿರುವ ನಂಜಪ್ಪ ಹಾಗೂ ತಾಯಿ ವಿಜಯಲಕ್ಷ್ಮಿ. ಯಶ್ವಂತ್ ಗೌಡನ ಸಾಧನೆಗೆ ಪ್ರೋತ್ಸಾಹ ನೀಡಲು ಇಚ್ಛಿಸುವವರು ತರಬೇತುದಾರ ದಂಡಿನಶಿವರ ತಿಮ್ಮೇಗೌಡರನ್ನು (9980671479) ಗೆ ಅಥವಾ ಇಂಡಿಯನ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಡಾ. ರುದ್ರಯ್ಯ ಹಿರೇಮಠ್(9481693116) ಯಶ್ವಂತ್ ಗೌಡನ ತಾಯಿ ವಿಜಯಲಕ್ಷ್ಮಿ( 8277072705) ರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!