ಗುಬ್ಬಿ: ತಾಲೂಕಿನ ನಡುವಲಪಾಳ್ಯದಲ್ಲಿ ವರುಣನಿಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆಯನ್ನು ಸಾಂಪ್ರದಾಯಿಕವಾಗಿ ನಡೆಸಲಾಯಿತು. ಮಳೆಗಾಲ ಆರಂಭವಾದರೂ ಮಳೆ ಬಾರದ ಕಾರಣ ವರುಣನಿಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆಯನ್ನು ಗ್ರಾಮದ ಜನತೆ ಅದ್ಧೂರಿಯಾಗಿ ಧಾರ್ಮಿಕ ಆಚರಣೆ ಮೂಲಕ ನಡೆಸಿದ ಪ್ರಸಂಗ ತಾಲೂಕಿನ ನಡುವಲಪಾಳ್ಯದಲ್ಲಿ ನಡೆಯಿತು. ಕತ್ತೆಗಳ ಮದುವೆ ಅಂಗವಾಗಿ ಗ್ರಾಮದ ಘಂಟೆ ಬಸವಣ್ಣನ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಕತ್ತೆಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿದ ನಂತರ ಗೋದೂಳಿ ಲಗ್ನದಲ್ಲಿ ಮದುವೆ ಕಾರ್ಯ ನಡೆಸಲಾಯಿತು.