ತುಮಕೂರು

ಮೈಕ್ರೋಫೈನಾನ್ಸ್ ಹಣ ಪಾವತಿಗೆ ಕ್ರಮ

ತುರುವೇಕೆರೆ: ಪಟ್ಟಣದಲ್ಲಿದ್ದ ಎಲ್ಐಸಿಯ ಸಮನ್ವಯ ಮೈಕ್ರೋ ಫೈನಾನ್ಸ್ ನಲ್ಲಿ ದುರುಪಯೋಗವಾಗಿರುವ ಹಣವನ್ನು ಮರು ಪಾವತಿ ಮಾಡುವ ಸಂಬಂಧ ಸಮಿತಿಯ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ಸಂಸ್ಥೆಯ ಖಜಾಂಚಿ ಅರಳೀಕೆರೆ ಮೋಹನ್ ತಿಳಿಸಿದ್ದಾರೆ.
ಅರಳೀಕೆರೆ ಗ್ರಾಮದಲ್ಲಿ ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಅರಳೀಕೆರೆ ರವಿಕುಮಾರ್, ಪಿಎಲ್ಡಿ ಬ್ಯಾಂಕ್ನ ನಿರ್ದೇಶಕ ಟಿ.ಎಸ್.ಬೋರೇಗೌಡ, ಮಾನವ ಹಕ್ಕುಗಳ ಹೋರಾಟಗಾರ ಸಿದ್ಧಲಿಂಗೇಗೌಡ, ತಿಪಟೂರಿನ ದೇವರಾಜು, ಗ್ರಾಮದ ಮುಖಂಡರಾದ ಶಿವಯ್ಯ, ಮೈಕ್ರೋ ಫೈನಾನ್ಸ್ನ ಪ್ರತಿನಿಧಿಗಳು, ಗ್ರಾಹಕರು ಹಾಗೂ ಸಂಸ್ಥೆಯ ಖಜಾಂಚಿ ಅರಳೀಕೆರೆ ಮೋಹನ್, ಸಿಬ್ಬಂದಿ ಹರೀಶ್ ಮೊದಲಾದವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಸ್ಪಷ್ಟ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಗ್ರಾಹಕರ ಹೆಸರಿನಲ್ಲಿ ಎಲ್ಐಸಿಯ ಮೈಕ್ರೋ ಫೈನಾನ್ಸ್ ನ ಮುಖ್ಯ ಕಚೇರಿಗೆ ಹಣ ಸಂದಾಯ ಮಾಡದೇ ತಮ್ಮಿಂದ ತಪ್ಪಾಗಿದೆ. ಆದ್ದರಿಂದ ಸಮಿತಿ ಪದಾಧಿಕಾರಿಗಳು ತಿಪಟೂರಿನಲ್ಲಿದ್ದು, ಅವರೊಂದಿಗೆ ಚರ್ಚಿಸಿ ಗ್ರಾಹಕರ ಹಣವನ್ನು ಕೆಲವೇ ದಿನಗಳಲ್ಲಿ ಮರುಪಾವತಿ ಮಾಡುವುದಾಗಿ ಅರಳೀಕೆರೆ ಮೋಹನ್ ಭರವಸೆ ನೀಡಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ