ತುಮಕೂರು

ಶಾದಿಭಾಗ್ಯ ಬೇಡ, ಶೀಲಭಾಗ್ಯ ಕೊಡಿ

ಚಿಕ್ಕನಾಯಕನಹಳ್ಳಿ: ಸಿದ್ದರಾಮಯ್ಯನವರೆ ನಿಮ್ಮ ಶಾದಿಭಾಗ್ಯ, ಕ್ಷೀರಭಾಗ್ಯ, ಅನ್ನಭಾಗ್ಯಗಳನ್ನು ಬದಿಗಿಟ್ಟು ನಮಗೆ ಶೀಲಭಾಗ್ಯ ಕರುಣಿಸಿ ಎಂದು ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಪ್ರೇಮಾಹೆಗ್ಡೆ ರಾಜ್ಯ ಸರ್ಕಾರವನ್ನು ಟೀಕಿಸಿದರು.
ಗುರುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರೆ ನೀವು ನಿದ್ದೆ ಮಾಡುವುದರಲ್ಲೇ ಕಾಲಹರಣ ಮಾಡುವುದರಿಂದ ರಾಜ್ಯದ ಹಿತಕಾಪಾಡುವಲ್ಲಿ ವಿಫಲರಾಗಿದ್ದೀರಿ. ರಾಜ್ಯದಲ್ಲಿ ನಾಲ್ಕು ವರ್ಷದ ಹಸುಳೆಯಿಂದ -ವೃದ್ಧೆಯರವರಗೆ ಅತ್ಯಾಚಾರ ನಡಯುತ್ತಿದೆ. ಆದರು ನೀವು ಏನು ಆಗಿಲ್ಲವಂಬಂತೆ ನಿದ್ದೆ ಮಾಡುವುದರಲ್ಲಿ ಮಗ್ನರಾಗಿದ್ದೀರಿ. ಆಡಳಿತ ನಡೆಸುವ ಅರ್ಹತೆ ನಿಮ್ಮಲ್ಲಿಲ್ಲವಾದ್ದರಿಂದ ಕೂಡಲೇ ರಾಜಿನಾಮೆ ನೀಡಿ ಎಂದು ಒತ್ತಾಯಿಸಿದರು.
ಜಿಲ್ಲಾ ಮಹಿಳಾ ಪ್ರಧಾನಕಾರ್ಯದರ್ಶಿ ಅನಿತಾನಂಜುಂಡಯ್ಯ ಮಾತನಾಡಿ, ನಿಮ್ಮಲ್ಲಿರುವ ಬಣ ಜಗಳದಿಂದ ಮಹಿಳೆಯರ ಶೀಲಹರಣವಾಗುತ್ತಿದೆ. ಆಡಳಿತ ನಡೆಸುವ ಯೋಗ್ಯತೆಯಿಲ್ಲದ ಮೇಲೆ ರಾಜಿನಾಮೆ ಕೊಟ್ಟು ತೊಲಗಿ.ಅಮಾಯಕರ ಮಾನಪ್ರಾಣ ರಕ್ಷಣೆ ನಿಮ್ಮ ಕೈಯಲ್ಲಿ ಸಾಧ್ಯವಿಲ್ಲ. ಅಸಮರ್ಥ ಗೃಹಮಂತ್ರಿಯನ್ನು ಮನೆಗ ಕಳುಹಿಸಿ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿಶಾಸಕರಾದ ಕ.ಎಸ್. ಕಿರಣ್‌ಕುಮಾರ್, ಬಿ.ಸಿ. ನಾಗೇಶ್, ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಜಿಲ್ಲಾಪ್ರಧಾನ ಕಾರ್ಯದರ್ಶಿ ನಾಗರತ್ನಮ್ಮ, ತಾಲೂಕು ಮಹಿಳಾ ಅಧ್ಯಕ್ಷೆ ಮಾಲಾ ಬಸವರಾಜು, ತಾಲೂಕು ಅಧ್ಯಕ್ಷ ಎಂ.ಎಂ. ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ