ತುಮಕೂರು

ಸಮಾಜದ ದೊಡ್ಡ ಶತ್ರು ಮದ್ಯ

ಚಿಕ್ಕನಾಯಕನಹಳ್ಳಿ: ಮಾನವನಲ್ಲಿ ಮೃಗೀಯ ಭಾವನೆವುಂಟು ಮಾಡಿ ಇಂದು ದೇಶಾದ್ಯಂತ ಅಲ್ಲೋಲ ಕಲ್ಲೋಲವೆಬ್ಬಿಸಿರುವ ಅತ್ಯಾಚಾರದಂತಹ ಹೀನ ಕೃತ್ಯವನ್ನೆಸಗಲು ಪ್ರೇರಣೆ ನೀಡುವ ಮದ್ಯವನ್ನು ತ್ಯಜಿಸಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಿ ಎಂದು ಡಾ. ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ನುಡಿದರು.
ಪಟ್ಟಣದ ಸಮೀಪವಿರುವ ದಬ್ಬೇಗಟ್ಟ ಗ್ರಾಮದ ಮರುಳಸಿದ್ದೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ದಾರಿಯಲ್ಲಿ ಹೋಗುವಾಗ ಆದ ಕಹಿ ಅನುಭವದಿಂದ ಬುದ್ಧನಿಗೆ ಜ್ಞಾನೋದಯವಾಯಿತು. ಅದರಿಂದ ಅವನಲ್ಲಿ ದಯೆ,ಪ್ರೀತಿ, ಮಾನವೀಯತೆ, ಸಂಸ್ಕಾರಗಳಿಂದ ಪ್ರಪಂಚಕ್ಕೆ ಶಾಂತಿಯನ್ನು ಬೋಧಿಸಿದ. ಬಸವಣ್ಣನ ಬಗ್ಗೆ ಕವಿಯೊಬ್ಬ ಹೇಳುವಂತೆ ನಮಗೆ ಕಾಯಕ ನಿಷ್ಠೆಯನ್ನು ಕಲಿಸಿದ ಬಸವಣ್ಣನೇ ನಾಯಕ. ಕಣ್ಣು, ಕಿವಿ, ಮೂಗು, ಬಾಯಿಯಂತಹ ಪಂಚೇದ್ರಿಯಗಳು ಚಿಕ್ಕವಾಗಿದ್ದರು ಅವುಗಳ ಮಹತ್ವ ಅಪಾರ. ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನು ಅವುಗಳ ನಿಗ್ರಹದಿಂದ ಸಾಧಿಸಬಹುದು ಎಂದರು.
ಎಲ್ಲವನ್ನು ನಮಗೆ ನೀಡುವುದು ಭೂಮಿ. ನಮ್ಮ ಇಹ ಜೀವನಕ್ಕೆ ಬೇಕಾದ ಚಿನ್ನ, ನೀರು, ದೇವರ ರೂಪವನ್ನು ನೀಡುವ ಕಲ್ಲು ಪ್ರತಿಯೊದು ನಮಗೆ ಭೂಮಿಯಿಂದಲೇ ಸಿಗುತ್ತದೆ. ಆದರೆ ಅದರಿಂದ ಭೂಮಿ ಎಂದೂ ಗರ್ವಪಟ್ಟಿಲ್ಲ. 20ನೇ ಶತಮಾನ ಗುರುವಿನ ಕಾಲ. ದೇಶವು ಸಹ ಇಂದು ವಿಶ್ವಗುರುವಿನ ಸ್ಥಾನವನ್ನು ಹೊಂದುವ ಎಲ್ಲಾ ಅವಕಾಶಗಳು ನಮ್ಮಲ್ಲಿವೆ. ಅವುಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕುಡಿತದಿಂದ ನಿಮ್ಮಿಂದ ಅಂತ್ಯ ಸಂಸ್ಕಾರ ಮಾಡಿಸಿಕೊಳ್ಳಬೇಕಾದವರಿಂದಲೇ ನೀವು ಅಂತ್ಯಸಂಸ್ಕಾರ ಮಾಡಿಸಿಕೊಳ್ಳುವ ಸ್ಥಿತಿಯನ್ನು ನಿಮ್ಮ ಕೈಯ್ಯಾರೆ ನೀವೇ ತಂದುಕೊಳ್ಳಬೇಡಿ. ಇಂದು ಸಮಾಜಕ್ಕಿರುವ ದೊಡ್ಡ ಶತ್ರು ಮದ್ಯ. ಅದನ್ನು ತ್ಯಜಿಸುವುದರಿಂದ ನೀವು ನಿಮ್ಮ ಮನೆಯವರನ್ನು ಪ್ರೀತಿಸುತ್ತೀರಿ, ಗೌರವಿಸುತ್ತೀರಿ. ಇದರಿಂದ ನಿಮ್ಮ ಸಂಸಾರ ನಂದನವನವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು712ನೇ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಿ.ಆರ್.ಸತೀಶ್ ವಹಿಸಿದ್ದರು. ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ, ಬಿಜೆಪಿ ಮುಖಂಡ ಜಿ.ರಾಮಾಂಜನೇಯ, ಜಿಲ್ಲಾ ಜನಜಾಗೃತಿ ವೇದಿಕೆಯ ಎಲ್.ರಾಜಣ್ಣ, ರೋಹಿತಾಕ್ಷ, ಎಲ್‌ಐಸಿ ಎಸ್.ರಾಜಶೇಖರ್, ರೇವಣ್ಣ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!