ಹೊನ್ನಾವರ/ ಹೊಸಪೇಟೆ: ಶರಾವತಿ ಅಣೆಕಟ್ಟು ಹಿನೀರು ಪ್ರದೇಶದಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಸೋಮವಾರ ಅಣೆಕಟ್ಟೆ ನೀರಿನ ಮಟ್ಟ 1802 ಅಡಿ ತಲುಪಿದ್ದರೆ, ಟಿಬಿ ಡ್ಯಾಂನ 33 ಕ್ರಸ್ಟಗೇಟ್‌ಗಳ ಮೂಲಕ 1.90 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಗೇರುಸೊಪ್ಪಾ ಶರಾವತಿ ಟೇಲರೀಸ್‌ಅಣೆಕಟ್ಟು ಭರ್ತಿಗೆ 14 ಅಡಿ ಬಾಕಿ ಇದ್ದು, 37 ಸಾವಿರ ಕ್ಯುಸೆಕ್ ಒಳಹರಿವಿದೆ. ಜಲಾಶಯ ಮಟ್ಟ 1816 ಅಡಿ ಆಗುವ ತನಕ ನೀರು ಹೊರಬಿಡಲ್ಲ. ಶರಾವತಿ ಎಡ-ಬಲ ದಂಡೆಯಲ್ಲಿ ಕಟ್ಟೆಚ್ಚರ ವಹಿಸಿ. ಜನ- ಜಾನುವಾರು ರಕ್ಷಣೆಗಾಗಿ 11 ದೋಣಿ ಮಂಜೂರಾಗಿದ್ದು, ಆಯಾ ಗ್ರಾಪಂಗಳಿಗೆ ನೀಡಿದೆ. ತಹಸೀಲ್ದಾರ್ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಬೇಕೆಂದು ಶಾಸಕ ಮಂಕಾಳ ವೈದ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಭಾನುವಾರ ಮಧ್ಯಾಹದಿಂದ ಸೋಮವಾರ ರಾತ್ರಿವರೆಗೂ ಟಿಬಿ ಡ್ಯಾಂನ 33 ಕ್ರಸ್ಟ್‌ಗೇಟ್‌ಗಳನು ನಾಲ್ಕೂವರೆ ಅಡಿ ಎತ್ತರಿಸಿದ್ದು, ಉಳಿದ 5 ಗೇಟ್‌ಗಳನು ಒಂದೂವರೆ ಅಡಿ ಎತ್ತರಿಸಿ 1.90 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಡ್ಯಾಂಗೆ 1.70 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನೀರು ಹೊರ ಬಿಟ್ಟಿದ್ದರಿಂದ ವಿಶ್ವವಿಖ್ಯಾತ ಹಂಪಿಯ ಪುರಂದರ ದಾಸರ ಮಂಟಪ ಭಾಗಶಃ ಮುಳುಗಡೆಯಾಗಿದ್ದು, ಇತರ ಕೆಲವು ಮಂಟಪಗಳು, ಸ್ಮಾರಕಗಳು ಜಲಾವೃತವಾಗಿವೆ.