ಉಡುಪಿ

ನಂದಳಿಕೆ: ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ ಉದ್ಘಾಟನೆ

ಕಾರ್ಕಳ: ಪ್ರೋತ್ಸಾಹ ಹಾಗೂ ಅವಕಾಶಗಳು ದೊರೆತಾಗ ಪ್ರತಿಭೆಗಳು ಅರಳಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆದಿಂಜೆ ಸುಪ್ರಿತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಂದಳಿಕೆ ಬೋರ್ಡ್ ಶಾಲೆ ಆತಿಥ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ನಂದಳಿಕೆ ಶಾಲಾ ವಿದ್ಯಾವಿಕಾಸ ಸಮಿತಿ ಹಾಗೂ ಶಾಲಾಭಿವೃದ್ಧಿ ಸಮಿತಿ, ಮೇಲುಸ್ತುವಾರಿ ಸಮಿತಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ 14ರಿಂದ 17ರ ವಯೋವುತಿಯ ಬಾಲಕ ಬಾಲಕಿಯರ ಕರಾಟೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.  ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಮಾತನಾಡಿದರು. ಬೆಳ್ಮಣ್ ಪಂಚಾಯಿತಿ ಅಧ್ಯಕ್ಷ ಶಂಕರ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ ಕ್ಷೇವಿಯರ್ ಡಿಮೆಲ್ಲೋ, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಉಡುಪಿಯ ಬಸವರಾಜ್, ನಂದಳಿಕೆ ಬೋರ್ಡ್ ಶಾಲಾ ವಿದ್ಯಾವಿಕಾಸ ಸಮಿತಿಯ ಶಶಿಧರ ಶೆಟ್ಟಿ, ಮೋಹನದಾಸ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗನ್ನಾಥ ಮೂಲ್ಯ ಮತ್ತಿತರರು ಇದ್ದರು. ಆತಿಥೇಯ ಶಾಲೆಯ ಕರಾಟೆ ಸಾಧಕಿ ಧನ್ಯ ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಕಾರ್ಕಳ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಾಬು ಪೂಜಾರಿ ಸ್ವಾಗತಿಸಿದರು. ಶಿಕ್ಷಕಿಯರಾದ ಎಮಿಲ್ಡಾ ಹಾಗೂ ಸುಮತಿ ಪುರಸ್ಕೃತರ ವಿವರ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಹೊಳ್ಳ ವಂದಿಸಿದರು. ಸದಾನಂದ ಶೆಟ್ಟಿ ನಿರೂಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿರೋಧ ಪಕ್ಷದ ಗದ್ದಲದ ನಡುವೆ ಸಂಸತ್ತಿನಲ್ಲಿ ಮೋದಿ ಸರ್ಕಾರದಿಂದ ಡೀಲಿಮಿಟೇಷನ್ ಮಸೂದೆಗೆ ಮರು ಜೀವ?

ರಾಜ್ಯಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ದೊಡ್ಡ ಹೊಡೆತ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದು!

'ಟ್ರಬಲ್ ಶೂಟರ್‌' ಡಿಕೆಶಿ​ಗೆ ಖಾತೆ ಹಂಚಿಕೆ ಟ್ರಬಲ್: ಹೈಕಮಾಂಡ್‌ ಭೇಟಿಗಾಗಿ ದೆಹಲಿಗೆ ಹಾರಿದ ಸಚಿವ ಕೃಷ್ಣ ಬೈರೇಗೌಡ

'ಅಟ್ರಾಕ್ಟಿವ್ ಹುಡುಗಿಯರ ಕಡೆಗೆ ಆಕರ್ಷಿತನಾಗಿದ್ದೇನೆ, ಆದ್ರೂ...' : ಸುದೀರ್ಘ ದಾಂಪತ್ಯದ ರಹಸ್ಯ ಬಿಚ್ಚಿಟ್ಟ ಆರ್. ಮಾಧವನ್

ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ: ನಮ್ಮ ಮೆಟ್ರೋಗೆ ಭಾರೀ ನಷ್ಟ; ಸಾಲ ಮರುಪಾವತಿ ಹೊರೆ ಹೆಚ್ಚಳ!

SCROLL FOR NEXT