ಉಡುಪಿ

ಕಲಾಸಕ್ತಿಯಿಂದ ಸಂತೃಪ್ತ ಜೀವನ: ಬನ್ನಂಜೆ ಸಂಜೀವ ಸುವರ್ಣ

Rashmi Kasaragodu


ಉಡುಪಿ: ಬದುಕು ಹಸನಾಗಲು ಕಲಾಸಕ್ತಿ ಅತ್ಯಗತ್ಯ, ಕಲೆಯಲ್ಲಿ ಆಸಕ್ತರು ಸಂತೃಪ್ತ ಜೀವನ ನಡೆಸುತ್ತಾರೆ ಎಂದು ಉಡುಪಿ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣ ಹೇಳಿದರು. ಅವರು ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ಸಾಂಸ್ಕೃತಿಕ ಸಂಘ ಏರ್ಪಡಿಸಿದ್ದ ಆಳ್ವಾಸ್ ನುಡಿಸಿರಿಯ ಬಡಗುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಾಲೇಜಿನ ವಿದ್ಯಾರ್ಥಿ ಕಲಾವಿದರನ್ನು ಅಭಿನಂದಿಸಿ ಮಾತನಾಡಿದರು. ಯಕ್ಷಗಾನ ವಿದ್ಯಾರ್ಥಿಗಳ ಪರವಾಗಿ ಪೂಜಿತಾ ತಮ್ಮ ಅನುಭವಗಳನ್ನು ಹಂಚಿಕೊಂಡು ಇಂತಹ ಸ್ಪರ್ಧೆ ಏರ್ಪಸಿದ್ದ ಆಳ್ವಾಸ್ ನುಡಿಸಿರಿಗೆ ಕೃತಜ್ಞತೆ ಸಲ್ಲಿಸಿದರು. ಉಪಸ್ಥಿತರಿದ್ದ ಹಿರಿಯ ವಿಮರ್ಶಕ ಮುರಳೀಧರ ಉಪಾಧ್ಯ ಅವರು ವಿದ್ಯಾರ್ಥಿಗಳು ಯಕ್ಷಗಾನದಂತಹ ಕಲಾಮಾಧ್ಯಮದತ್ತ ಒಲವನ್ನು ಬೆಳೆಸಿಕೊಳ್ಳುವಂತೆ ವಿನಂತಿಸಿದರು. ಕಾಲೇಜಿನ ಸಾಂಸ್ಕಣತಿಕ ಸಂಘದ ಪ್ರಾಧ್ಯಾಪಕ ಸಲಹೆಗಾರ ಡಾ. ಶ್ರೀಕಾಂತತ್ಸಿದ್ದಾಪುರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತಿರುವ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಯಕ್ಷಗಾನ ಪ್ರಸಂಗ ನಿರ್ದೇಶನದಲ್ಲಿ ಸಹಕರಿಸಿದ ಗುರುಗಳಾದ ಸಂಜೀವ ಸುವರ್ಣರನ್ನು, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ರಾಜ್ಯದ ಗಮನ ಸೆಳೆದ ಕಾಲೇಜಿನ ವಿದ್ಯಾರ್ಥಿನಿಯರಾದ ಗಾಗರ್ದಿ ಶಬರಾಯ ಋುತ್ತು ಶರಧಿ ಪಾಟೀಲ ಅವರನ್ನು ಕಾಲೇಜಿನ ಪರವಾಗಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಸದಾಶಿವ ರಾವ್  ಅಭಿನಂದಿಸಿದರು. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಶಾಸ್ತ್ರಿ ಸ್ವಾಗತಿಸಿ, ರಶ್ಮಿಶ್ರೀ ವಂದಿಸಿದರು.

SCROLL FOR NEXT