ಉತ್ತರ ಕನ್ನಡ

ಸರ್ಕಾರದ ನಿರ್ಲಕ್ಷ್ಯದಿಂದ ತರಿ ಭೂಮಿ ನಾಶ




ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 1
ಸರ್ಕಾರದ ನಿರ್ಲಕ್ಷ್ಯತನ ಹಾಗೂ ವಿವಿಧ ಕಾರಣಗಳಿಂದ ತರಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಭವಿಷ್ಯದ ದೃಷ್ಟಿಯಿಂದ ಇದು ಆತಂಕಕಾರಿ ಸಂಗತಿ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಟಿ.ವಿ. ರಾಮಚಂದ್ರ ಹೇಳಿದರು.
ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಕಾಲದ ತರಿ ಜಮೀನು ಹಾಗೂ ನೀರು ಮತ್ತು ವಿಶ್ವ ತರಿ ಭೂಮಿ ದಿನಾಚರಣೆ ರಾಷ್ಟ್ರೀಯ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ರಾಜ ಮಹಾರಾಜರ ಕಾಲದಲ್ಲಿ ತರಿ ಜಮೀನು ಹಾಗೂ ನೀರಿನ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿತ್ತು. ಅದಕ್ಕೆ ಅವರು ಮಹತ್ವವನ್ನೂ ನೀಡಿದ್ದರು. ಆದರೆ ಸ್ವಾತಂತ್ರ್ಯಾನಂತರ  ನಮ್ಮ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ತರಿ ಭೂಮಿ ಹಾಗೂ ನೀರಿನ ನಿರ್ವಹಣೆ ಬಗ್ಗೆ ಕಾಳಜಿ ವಹಿಸಲಿಲ್ಲ. ಇದರ ಜೊತೆಗೆ ಇನ್ನಿತರ ಕಾರಣಗಳೂ ಸೇರಿಕೊಂಡು ತರಿ ಜಮೀನು ಕಡಿಮೆಯಾಗುತ್ತಿದೆ. ಜಲ ಸಂಪನ್ಮೂಲವೂ ಇಳಿಮುಖವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾರಕ ಪರಿಣಾಮ: ಬೆಂಗಳೂರು ಮಹಾನಗರ ಹಿಂದೆ ಹೇಗಿತ್ತು. ಈಗ ಹೇಗಿತ್ತು ಎಂದು ಅಂಕಿ ಅಂಶಗಳೊಂದಿಗೆ ವಿವರಿಸಿದ ರಾಮಚಂದ್ರ, ಭೂ ಮಾಫಿಯಾ, ಹಣದಾಸೆಗಾಗಿ ನಡೆಯುವ ಭೂಹಗರಣ, ಅಕ್ರಮವಾಗಿ ತ್ಯಾಜ್ಯಗಳನ್ನು ಎಸೆಯುವುದು, ಕೆರೆಗಳನ್ನು ಮುಚ್ಚುವುದು, ಅತಿಕ್ರಮಣ, ಕೈಗಾರಿಕೆಗಳ ಸ್ಥಾಪನೆಯಿಂದ ಜಲ ಮಾಲಿನ್ಯ ಮೊದಲಾದ ಕಾರಣಗಳಿಂದ ಜಲ ಸಂಪನ್ಮೂಲ ಹಾಗೂ ತರಿ ಜಮೀನಿನ ಮೇಲೆ ಮಾರಕ ಪರಿಣಾಮಗಳಾಗುತ್ತಿವೆ ಎಂದರು. ಭೂಮಿ ಹಾಗೂ ನೀರಿನ ನಡುವೆ ಸಂಪರ್ಕ ಕಲ್ಪಿಸುವುದೇ ತರಿ ಜಮೀನು. ತರಿ ಜಮೀನು ವಿವಿಧ ಕಾರಣಗಳಿಂದ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಈಗಲೇ ನಾವು ಎಚ್ಚೆತ್ತುಕೊಳ್ಳಬೇಕು. ತರಿಭೂಮಿ ಹಾಗೂ ನೀರಿನ ನಿರ್ವಹಣೆ ಬಗ್ಗೆ ಕಾಳಜಿ ವಹಿಸಬೇಕು. ಇನ್ನಷ್ಟು ಕೆರೆಗಳನ್ನು ನಿರ್ಮಿಸಬೇಕು. ಈ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ತುಂಬ ದೊಡ್ಡದು. ಮುಂದಿನ ತಲೆಮಾರಿಗೆ ಜಲ ಸಂಪನ್ಮೂಲ ಹಾಗೂ ತರಿ ಜಮೀನನ್ನು ಉಳಿಸಿಕೊಳ್ಳಬೇಕು ಎಂದು ರಾಮಚಂದ್ರ ಅಭಿಪ್ರಾಯಪಟ್ಟರು.
ಸಮಾಜಕ್ಕೆ ತಲುಪುವಂತಾಗಲಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣಸಿದ್ದಪ್ಪ ಸಮಾವೇಶವನ್ನು ಉದ್ಘಾಟಿಸಿ, ಈ ಸಮಾವೇಶದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಕರು ಇಲ್ಲಿ ಮೂಡಿಬಂದ ವಿಚಾರಗಳನ್ನು ಮಕ್ಕಳ ಮೂಲಕ ಸಮಾಜಕ್ಕೆ ತಲುಪಿಸುವಂತಾಗಬೇಕು ಎಂದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ವಿ.ಎನ್. ನಾಯಕ, ತರಿ ಜಮೀನು ಹಾಗೂ ನೀರಿನ ಬಗ್ಗೆ ಏರ್ಪಡಿಸಲಾಗಿರುವ ರಾಷ್ಟ್ರೀಯ ಸಮಾವೇಶದಲ್ಲಿ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತಿತರ ಕಡೆಗಳಿಂದ ತಜ್ಞರು ಆಗಮಿಸಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಮಾವೇಶ ಉಪಯುಕ್ತವಾಗಲಿರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಗೋವಾ ವಿಶ್ವವಿದ್ಯಾಲಯದ ಪ್ರೊ. ಜಿ.ಎನ್. ನಾಯಕ, ಡಾ.ಎಚ್. ಹೊನ್ನೇಗೌಡ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಜಿ.ಆರ್. ಗಣೇಶನ್ ಮತ್ತಿತರರು ಇದ್ದರು. ಸಮಾವೇಶದಲ್ಲಿ ವೆಟ್‌ಲ್ಯಾಂಡ್ಸ್ ಆಂಡ್ ವಾಟರ್ ಎಂಬ ಸ್ಮರಣ ಸಂಚಿಕೆಯನ್ನು ಡಾ. ಹೊನ್ನೇಗೌಡ ಬಿಡುಗಡೆ ಗೊಳಿಸಿದರು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶದಲ್ಲಿ ಇಂಧನ ಕೊರತೆ ಇಲ್ಲ, ಆದ್ರೆ...: ಪ್ರಧಾನಿ ಮೋದಿ ಹೇಳಿಕೆಗೆ ಕಾರಣ ನೀಡಿದ IGoM

Explainer: ಮಿತವ್ಯಯಕ್ಕೆ ಮೋದಿ ಕರೆ: ಕಷ್ಟದ ದಿನಗಳೋ? Forex ಉಳಿಕೆಯ ಮರ್ಮವೋ..? 72ಬಿಲಿಯನ್ $ ಹಿಂದಿನ ರಹಸ್ಯ

ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್​ ಮೌಲ್ಯ '99 ಲಕ್ಷ ರೂ.’; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ, Video!

ತುಮಕೂರು: ದೇವರಾಯನದುರ್ಗ ಬೆಟ್ಟದಿಂದ ಜಿಗಿದು PWD ಸಹಾಯಕ ಇಂಜಿನಿಯರ್ ಆತ್ಮಹತ್ಯೆ; ಕಾರಣ ನಿಗೂಢ

Video: ಆರಂಭದಲ್ಲೇ TVK ಸರ್ಕಾರಕ್ಕೆ ವಿಘ್ನ: ತಮಿಳುನಾಡಿನ ಏಕೈಕ ಮಹಿಳಾ ಸಚಿವೆ ಎಸ್. ಕೀರ್ತನಾ ಪ್ರಮಾಣವಚನಕ್ಕೆ ಬ್ರೇಕ್, Video!

SCROLL FOR NEXT