ಭಟ್ಕಳ: ಪಟ್ಟಣದ ಅಬಕಾರಿ ಇಲಾಖೆಯಿಂದ ವಿವಿಧ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ಸಾಗರ ರಸ್ತೆಯ ಗುಳ್ಮಿ ಪ್ರದೇಶದಲ್ಲಿ ನಾಶಪಡಿಸಲಾಯಿತು. 122.070 ಲೀ ಗೋವಾ ಮದ್ಯ, 69.25 ಲೀ ಬೆಲ್ಲದ ಕೊಳೆ, 151.820 ಲೀ ಕಳ್ಳಭಟ್ಟಿ ಸಾರಾಯಿಯನ್ನು ನಾಶಪಡಿಸಲಾಯಿತು. ಈ ಸಂದರ್ಭದಲ್ಲಿ ಹೊನ್ನಾವರ ವಿಭಾಗದ ಅಬಕಾರಿ ಉಪ ಅಧೀಕ್ಷಕ ಜಿ.ಎಚ್. ನಾಯ್ಕ, ಭಟ್ಕಳ ಅಬಕಾರಿ ಉಪ ನಿರೀಕ್ಷಕರ ಜೆ.ಡಿ. ಆನಂದ, ಸಿಬ್ಬಂದಿ ಮಂಜುನಾಥ ನಾಯ್ಕ, ಗುರು, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.